ಬಿಹಾರ: ಛಾತ್‌ನ ವೇಳೆ 7 ಮಕ್ಕಳು ನೀರುಪಾಲು
Update: 2016-11-07 19:19 IST
ಪಾಟ್ನಾ, ನ.7: ಬಿಹಾರದ ಮೂರು ಜಿಲ್ಲೆಗಳಲ್ಲಿ ಇಂದು ಮುಂಜಾನೆ ಛಾತ್ ಪೂಜೆಯ ವೇಳೆ 7 ಮಕ್ಕಳು ನೀರುಪಾಲಾಗಿದ್ದಾರೆ.
ಗ್ರಾಮೀಣ ಪಾಟ್ನಾದ ಬರ್ಹ್ ಉಪವಲಯದ ಮಲಾಡಿ ಘಾಟ್‌ನ ಸಮೀಪ 8-9ರ ಹರೆಯದ ಇಬ್ಬರು ಬಾಲಕಿಯರು ಜಲಸಮಾಧಿಯಾದರೆಂದು ಬರ್ಹ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಮನೋಜ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಖಗರಿಯಾ ಜಿಲ್ಲೆಯ ಬಾಗ್ಮತಿ ನದಿಯ ಭಾರ್ಪುರ ಘಾಟ್‌ನ ಸಮೀಪ 14ರಿಂದ 16ರ ಪ್ರಾಯದ ಮೂವರು ಬಾಲಕರು ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಮುಂಜಾನೆ ಅವರು ಸೂರ್ಯನಿಗೆ ಅರ್ಘ್ಯ ನೀಡಲು ನದಿಯ ಆಳಕ್ಕೆ ಹೋಗಿದ್ದರು.
ಇನ್ನೊಂದು ದುರಂತ ಘಟನೆ ಮುಝಫ್ಫರ್‌ಪುರ ಜಿಲ್ಲೆಯಲ್ಲಿ ಸಂಭವಿಸಿದ್ದು, ಇಬ್ಬರು ಮಕ್ಕಳು ಕಡನಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.