ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಮಲ್ಪೆ
ಉಡುಪಿ, ನ.7: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2016-18ನೆ ಸಾಲಿನ ನೂತನ ಅಧ್ಯಕ್ಷರಾಗಿ ಯಾಸೀನ್ ಮಲ್ಪೆ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಹುಸೇನ್ ಕೋಡಿಬೆಂಗ್ರೆ, ಜೊತೆಕಾರ್ಯ ದರ್ಶಿ ವಿ.ಎಸ್.ಉಮರ್, ಹಿರಿಯ ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ಲ ಪಾರ್ಕಳ, ಉಪಾಧ್ಯಕ್ಷರುಗಳಾಗಿ ಅಶ್ಪಾಕ್ ಅಹ್ಮದ್ ಕಾರ್ಕಳ, ಮುಸ್ತಕ್ ಅಹ್ಮದ್ ಬೆಳ್ವೆ, ಖತೀಬ್ ಅಬ್ದುರ್ರಶೀದ್, ಖಜಾಂಚಿಯಾಗಿ ಕಾಸೀಮ್ ಬಾರಕೂರು, ಸಂಘಟನಾ ಕಾರ್ಯದರ್ಶಿಯಾಗಿ ಸಾದಿಕ್ ಅಬು ಹಾಜಿ, ಪತ್ರಿಕಾ ಕಾರ್ಯದರ್ಶಿಯಾಗಿ ಮುಹಮ್ಮದ್ ಇದ್ರೀಸ್ ಹೂಡೆ, ತ್ರೈಮಾಸಿಕ ಪತ್ರಿಕಾ ಸಂಪಾದಕರಾಗಿ ಜಿ.ಎಂ.ಶರೀಫ್ ಅವರನ್ನು ಆರಿಸಲಾಯಿತು.
ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು, ಕಾರ್ಯ ದರ್ಶಿಯಾಗಿ ಮುಹಮ್ಮದ್ ಆಲಮ್, ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಶಾಬಾನ್ ಹಂಗ್ಳೂರು, ಕಾರ್ಯದರ್ಶಿಯಾಗಿ ಬೆಟ್ಟೆ ಲಿಯಾಕತ್ ಅಹ್ಮದ್ ಕಂಡ್ಲೂರು, ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಸಯ್ಯದ್ ಹಸನ್ ಕಾರ್ಕಳ, ಕಾರ್ಯದರ್ಶಿಯಾಗಿ ನಾಸೀರುದ್ದೀನ್ ಕುಕ್ಕೂಂದೂರು, ತಾಲೂಕು ಉಸ್ತುವಾರಿಗಳಾಗಿ ಅಬ್ದುಲ್ ಅಜೀಝ್ ಉದ್ಯಾವರ(ಕಾರ್ಕಳ), ಶೇಕ್ ಸಲಾವುದ್ದೀನ್(ಉಡುಪಿ), ಖತೀಬ್ ಅಬ್ದುರ್ರಶೀದ್(ಕುಂದಾಪುರ), ಅವರನ್ನು ಆಯ್ಕೆ ಮಾಡಲಾಯಿತು.
ಕೇಂದ್ರ ಸಮಿತಿಯ ಸದಸ್ಯರುಗಳಾಗಿ ನಕ್ವ ಯಾಹ್ಯಾ, ಸಯ್ಯದ್ ಅಬ್ಬಾಸ್ ಕಾರ್ಕಳ, ಅಬ್ದುಲ್ ಮುನಾಫ್ ಕಂಡ್ಲೂರು, ಮುಹಮ್ಮದ್ ಆಸೀಫ್, ಜಿ.ಸರ್ದಾರ್ ಗುಲ್ವಾಡಿ, ಹುಸೇನ್ ಹೈಕಾಡಿ, ಮುಹಮ್ಮದ್ ರಫೀಕ್, ಅಜೀಜ್ ಉದ್ದೀನ್ರೀಜ್ವಾವನ್, ಅಬ್ದುರ್ರಶೀದ್, ಸಲಾವುದ್ದೀನ್ ಅಬ್ದುಲ್ಲಾ ಶೇಕ್, ಶಾಬಿ ಅಹ್ಮದ ಖಾಜಿ, ಅಬ್ದುರ್ರಹ್ಮಾನ್ ಮಲ್ಪೆ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಂ.ಪಿ.ಮೊದಿನಬ್ಬ, ಶೌಕತ್ ಹುಸೇನ್, ಕಾರ್ಕಳ, ಮುಹಮ್ಮದಲಿ ಸಾಹೇಬ್, ರಫೀಕ್ ಅಹ್ಮದ್ ಗಂಗೊಳ್ಳಿ, ಖಲೀಲ್ ಅಹ್ಮದ್, ಮುಹಮ್ಮದ್ ವೌಲಾ, ಅಬ್ದುಲ್ಲಾ ನಾವುಂದ, ಫಾರೂಕ್ ಪಡುಬಿದ್ರೆ, ಇಸ್ಮಾಯಿಲ್ ಶಿರೂರು, ಮುಹಮ್ಮದ್ ಯೂನುಸ್ ಕಾಪು ಆಯ್ಕೆಯಾದರು.