×
Ad

ಬುದ್ಧಿಮಾಂದ್ಯ ಮಹಿಳೆಯ ಅತ್ಯಾಚಾರ

Update: 2016-11-07 22:51 IST

ತೀರ್ಥಹಳ್ಳಿ, ನ.7: ಬುದ್ಧಿಮಾಂದ್ಯ ಮಹಿಳೆಯನ್ನು ಇಬ್ಬರು ದುಷ್ಕ ರ್ಮಿಗಳು ಅತ್ಯಾಚಾರ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪಗ್ರಾಮದಲ್ಲಿ ಶನಿವಾರ ರಾತ್ರಿ ವರದಿಯಾಗಿದೆ.

ಶನಿವಾರ ರಾತ್ರಿ ಹೊಳೆ ಕೊಪ್ಪದ ಮನೆಯಲ್ಲಿ ಬುದ್ಧಿಮಾಂದ್ಯ ಮಹಿಳೆ ಒಬ್ಬಳೇ ಇದ್ದಾಗ ಈ ದುರ್ಘಟನೆ ಸಂಭವಿಸಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಅಣ್ಣ ಸಮೀಪದ ಮನೆಯೊಂದಕ್ಕೆ ಅಡಿಕೆ ಕೊಯ್ಲಿನ ಕಾರ್ಯಕ್ಕೆ ಹೋದ ಸಂದರ್ವನ್ನು ಗಮನಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News