'ಕುಡ್ಲ ಟ್ರಾಫಿಕ್' ವಾಟ್ಸಪ್ ಗ್ರೂಪಿಗೆ ದೂರು: ಬಸ್ ಚಾಲಕನ ಮೇಲೆ ಪ್ರಕರಣ ದಾಖಲು
Update: 2016-11-07 23:19 IST
ಮಂಗಳೂರು, ನ.7: 'ಕುಡ್ಲ ಟ್ರಾಫಿಕ್' ವಾಟ್ಸಪ್ ಗ್ರೂಪಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಿ ಬಸ್ಸನ್ನು ಮುಟ್ಟುಗೋಲು ಹಾಕಿದ್ದಾರೆ.
ನಗರದ ಬಂಟ್ಸ್‌ಹಾಸ್ಟೆಲ್ ಬಸ್ ಸ್ಟ್ಯಾಂಡ್ ಸಮೀಪ ಹಾಕಲಾದ ಟ್ರಾಫಿಕ್ ಕೋನ್‌ಗಳ ಮೇಲೆಯೇ ಬಸ್ಸನ್ನು ಚಲಿಸಿ ಸಾರ್ವಜನಿಕ ಆಸ್ತಿ ನಷ್ಟವುಂಟು ಮಾಡಿದ ಆರೋಪ ಮತ್ತು ಅಜಾಗರೂಕತೆ ಚಾಲನೆ ಮೇಲೆ ಖಾಸಗಿ ಬಸ್ಸಿನ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ. ಸಾರಿಗೆ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಸಾರ್ವಜನಿಕರೊಬ್ಬರು ಪೊಲೀಸ್ ಕಮಿಷನರೇಟ್ ಕಚೇರಿಯ 'ಕುಡ್ಲ ಟ್ರಾಫಿಕ್' ವಾಟ್ಸಪ್ ಗ್ರೂಪಿಗೆ ಫೋಟೋ ಸಹಿತ ಶುಕ್ರವಾರ ದೂರು ನೀಡಿದ್ದರು.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.