×
Ad

ಎಸ್ ಕೆಎಸ್ಎಂ ಯೂತ್ ವಿಂಗ್ ನಿಂದ ಮಯ್ಯತ್ ಪರಿಪಾಲನೆ ಕುರಿತು ಮಾಹಿತಿ ಕಾರ್ಯಕ್ರಮ

Update: 2016-11-07 23:28 IST

ಮಂಗಳೂರು, ನ.7: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಯೂತ್ ವಿಂಗ್ ವತಿಯಿಂದ ಮಯ್ಯತ್ ಪರಿಪಾಲನೆ ಕುರಿತು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಗರದ ದಾರುಲ್ ಖೈರ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಉಸ್ತಾದ್ ಮುಸ್ತಫಾ ದಾರಿಮಿಯವರು ರೋಗಿಯ ಸಂದರ್ಶನ, ಮಯ್ಯತ್ ಸ್ಥಾನ, ಕಫನ್, ಜನಾಝಾ ನಮಾಝ್, ದಫನ್ ಎಂಬ ವಿಷಯಗಳ ಕುರಿತು ವಿವರಿಸಿದರು.

ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮರ್, ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ, ಎಸ್ ಕೆಎಸ್ಎಂ ಯೂತ್ ವಿಂಗ್ ನ ಇಬ್ರಾಹಿಂ ಸೌಶಾದ್, ಇಂಝಾಮ್, ಮುಝಮ್ಮಿಲ್, ಫಾಝಿಲ್ ಕುದ್ರೋಳಿ ಉಪಸ್ಥಿತರಿದ್ದರು.

ಮೂಸ ಫಾಝಿಲ್ ಕುದ್ರೋಳಿ ಸ್ವಾಗತಿಸಿದರು. ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಜೊತೆ ಕಾರ್ಯದರ್ಶಿ ಎಂ.ಜಿ ಮುಹಮ್ಮದ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News