×
Ad

ಇಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ

Update: 2016-11-07 23:54 IST
ಪ್ಯಾಸಡೇನದ ಇಂಪೀರಿಯಲ್‌ನಲ್ಲಿರುವ ವಿಮಾನ ನಿಲ್ದಾಣವೊಂದರ ಸಮೀಪ ರವಿವಾರ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಚುನಾವಣಾ ಭಾಷಣ ಮಾಡುತ್ತಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್.

ವಾಶಿಂಗ್ಟನ್, ನ. 7: ಅಮೆರಿಕದ 45ನೆ ಅಧ್ಯಕ್ಷರನ್ನು ಆರಿಸುವ ಮತದಾನ ಆರಂಭಗೊಳ್ಳಲು ಕೆಲವೇ ಗಂಟೆಗಳು ಉಳಿದಿರುವಂತೆಯೇ, ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಹಿಲರಿ ಕ್ಲಿಂಟನ್ ನಡುವಿನ ಸ್ಪರ್ಧೆ ಜಿದ್ದಾ ಜಿದ್ದಿನಿಂದ ಕೂಡಿದೆ.

ದೇಶಾದ್ಯಂತ ಮತದಾನ ಮಂಗಳವಾರ ನಡೆಯಲಿದೆ.
ಹಿಲರಿ ಕ್ಲಿಂಟನ್ ವಿರುದ್ಧ ಯಾವುದೇ ಆರೋಪ ಹೊರಿಸಲಾಗುವುದಿಲ್ಲ ಎಂಬುದಾಗಿ ಅವರ ಖಾಸಗಿ ಇಮೇಲ್ ಸರ್ವರ್ ಬಗ್ಗೆ ತನಿಖೆ ನಡೆಸಿರುವ ಎಫ್‌ಬಿಐ ರವಿವಾರ ಸ್ಪಷ್ಟನೆ ನೀಡಿದೆ.
ಆದರೆ, ಅದಕ್ಕೂ ಒಂದು ವಾರ ಮೊದಲಿನ ರವಿವಾರ ಎಫ್‌ಬಿಐ ನೀಡಿದ ಹೇಳಿಕೆಯ ಬಳಿಕ ಟ್ರಂಪ್ ಮುನ್ನಡೆ ಗಳಿಸಿದ್ದರು.
ಹಿಲರಿ ವಿರುದ್ಧದ ಖಾಸಗಿ ಇಮೇಲ್ ಸರ್ವರ್ ಪ್ರಕರಣ ಕೊನೆಯ ಚುನಾವಣಾ ಪ್ರಚಾರ ವಾರದಲ್ಲಿ ಅವರಿಗೆ ಹಿನ್ನಡೆ ತಂದುಕೊಟ್ಟಿತ್ತು. ಆದಾಗ್ಯೂ, ಅವರು ಮುನ್ನಡೆಯನ್ನು ಉಳಿಸಿಕೊಂಡಿದ್ದಾರೆ ಎಂಬುದಾಗಿ ಸಮೀಕ್ಷೆಗಳು ಹೇಳಿವೆ.
ಆರಂಭದಲ್ಲಿ ಹಿಲರಿ ಜೊತೆಗೆ ಕ್ಲಿಂಟನ್ ಸಮಬಲ ಹೊಂದಿದ್ದಾರೆ ಎಂಬುದಾಗಿ ಸಮೀಕ್ಷೆಗಳು ಹೇಳಿದ್ದವಾದರೂ, ಸೆಪ್ಟಂಬರ್‌ನಲ್ಲಿ ಹೊರಬಿದ್ದ ಅವರ ಸರಣಿ ಲೈಂಗಿಕ ಹಗರಣಗಳು ಅವರಿಗೆ ಮುಳುವಾದವು. ಅವರು ತನ್ನ ಎದುರಾಳಿಗಿಂತ ಸ್ಪರ್ಧೆಯಲ್ಲಿ ಹಿಂದೆ ಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News