×
Ad

"ದೇಖೇಂಗೆ ಕಿತ್ನಾ ಮಾ ಕಾ ದೂದ್ ಪಿಯಾ ಹೈ"

Update: 2016-11-08 09:15 IST

ಕೈರಾನ (ಉತ್ತರಪ್ರದೇಶ), ನ.8: ಬಿಜೆಪಿಯ ಪರಿವರ್ತನಾ ಯಾತ್ರೆ ಕೋಮುಸೂಕ್ಷ್ಮ ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ತಲುಪಿದ್ದು, "ಈ ಪ್ರದೇಶದಲ್ಲಿ ತಾಯಂದಿರು ಹಾಗೂ ಸಹೋದರಿಯರ ಆತ್ಮಗೌರವವನ್ನು ಲೂಟಿ ಮಾಡಲಾಗಿದೆ" ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಆಡಳಿತಾರೂಢ ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಜನರಲ್ಲಿ ಭೀತಿ ಹುಟ್ಟಿಸಲು ತೋಳ್ಬಲ ಬಳಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ..." ದೇಖೇಂಗೆ ಕಿತ್ನಾ ಮಾ ಕಾ ದೂದ್ ಪಿಯಾ ಹೈ" ಎಂದು ಅಣಿಮುತ್ತು ಉದುರಿಸಿದ್ದಾರೆ.
ಕೈರಾನಾ ಪಟ್ಟಣದಲ್ಲಿ ಮುಸ್ಲಿಮರು ಬಲಾತ್ಕಾರವಾಗಿ ಹಿಂದೂಗಳು ವಲಸೆ ಹೋಗುವಂತೆ ಭೀತಿ ಹುಟ್ಟಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ಹೇಳಿಕೆ ನೀಡಿದ್ದರು. ಇಂಥ ಸೂಕ್ಷ್ಮ ಪ್ರದೇಶದಲ್ಲಿ ಭಾಷಣ ಮಾಡಿದ ರಾಜನಾಥ್ ಸಿಂಗ್, "ಕ್ಯಾ ಹಾಲತ್ ಹೋ ಗಯಿ ಹೈ ಯಹಾನ್ ಪರ್? ಮಾತಾಂವೋ ಔರ್ ಬೆಹನೊ ಕಿ ಇಸ್ಮತ್ ಲೂಟಿ ಜಾ ರಹಿ ಹೈ. ಜನರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸುಳ್ಳು ಪ್ರಕರಣಗಳ ತನಿಖೆ ಕೈಬಿಡಲಾಗುವುದು ಮತ್ತು ಪ್ರಕರಣಗಳನ್ನೂ ರದ್ದು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ ಸಚಿವರು, ".ಬಿಜೆಪಿ ಸರ್ಕಾರ್ ಕೆ ಆನೆ ಕಿ ಬಾದ್ ಹಮ್ ದೇಖೇಂಗೆ ಕಿ ಉಸ್ನೆ ಕಿತ್ನಾ ಮಾ ಕಾ ದೂದ್ ಪಿಯಾ ಹೈ" ಎಂದು ಉದ್ಗರಿಸಿದರು.
ಇಲ್ಲಿ ಬಿಜೆಪಿಯ ಪ್ರಚಾರ ಘೋಷಣೆಯೇ, "ಮಾ ಬೆಹ್ನೋ ಕಿ ಆನ್ ಮೈನ್, ಬಿಜೆಪಿ ಮೈದಾನ್ ಮೈನ್" ಎಂದಾಗಿದೆ. "ಮಾನ್, ಸಮ್ಮಾನ್ ಔರ್ ಸ್ವಾಭಿಮಾನ್" ರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News