ಮಂಗಳೂರು ಎಪಿಎಂಸಿಗೆ ಡಿ.4ರಂದು ಚುನಾವಣೆ
*ಒಟ್ಟು 11 ಕ್ಷೇತ್ರ *31,151 ಮತದಾರರು
ಮಂಗಳೂರು, ನ.8: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ನ.14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನ.15 ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ನ.18 ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಡಿ.4ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಚುನಾವಣೆ ಹಾಗೂ ಡಿ.6ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.
1ನೆ ಕ್ಷೇತ್ರದ ಮುಲ್ಕಿಗೆ ಹಿಂದುಳಿದ ವರ್ಗ (ಬಿ), 2ನೆ ಕ್ಷೇತ್ರದ ಮುಲ್ಕಿಗೆ ಸಾಮಾನ್ಯ, 3ನೆ ಕ್ಷೇತ್ರದ ಕಲ್ಲಮುಂಡ್ಕೂರಿಗೆ ಸಾಮಾನ್ಯ, 4ನೆ ಕ್ಷೇತ್ರದ ಪುತ್ತಿಗೆಗೆ ಸಾಮಾನ್ಯ, 5ನೆ ಕ್ಷೇತ್ರದ ಮೂಡುಬಿದಿರೆಗೆ ಅನುಸೂಚಿತ ಜಾತಿ, 6ನೆ ಕ್ಷೇತ್ರದ ಶಿರ್ತಾಡಿಗೆ ಸಾಮಾನ್ಯ, 7ನೆ ಕ್ಷೇತ್ರದ ಸುರತ್ಕಲ್‌ಗೆ ಸಾಮಾನ್ಯ, 8ನೆ ಕ್ಷೇತ್ರದ ಎಡಪದವಿಗೆ ಅನುಸೂಚಿತ ಪಂಗಡ, 9ನೆ ಕ್ಷೇತ್ರದ ವಾಮಂಜೂರಿಗೆ ಮಹಿಳೆ, 10ನೆ ಕ್ಷೇತ್ರದ ಮಂಗಳೂರಿಗೆ ಹಿಂದುಳಿದ ವರ್ಗ(ಎ), 11ನೆ ಕ್ಷೇತ್ರದ ಕೋಟೆಕಾರಿಗೆ ಮಹಿಳೆ ಸ್ಥಾನ ಮೀಸಲಿಡಲಾಗಿದೆ. ಹೀಗೆ ಮಂಗಳೂರು ತಾಲೂಕಿನಲ್ಲಿ 11 ಕ್ಷೇತ್ರಗಳಿದ್ದು, ಒಟ್ಟು 31,151 ಕೃಷಿಕ ಮತದಾರರು ಮತದಾನ ಮಾಡಲು ಅರ್ಹರಿರುತ್ತಾರೆ.
*3 ಸ್ಥಾನಕ್ಕೆ ಮೀಸಲಿಲ್ಲ: ಇದಲ್ಲದೆ ವರ್ತಕರ ಕ್ಷೇತ್ರ, ಸಹಕಾರಿ ಸಂಘಗಳ ಕ್ಷೇತ್ರ, ಸಂಸ್ಕರಣ ಸಹಕಾರಿ ಸಂಘಗಳ ಕ್ಷೇತ್ರಗಳಿಗೆ ತಲಾ ಒಂದೊಂದು ಸ್ಥಾನ ನಿಗದಿಪಡಿಸಲಾಗಿದ್ದು, ಇವುಗಳಿಗೆ ಯಾವುದೇ ಮೀಸಲಾತಿ ಇಲ್ಲ.
*ತಹಶೀಲ್ದಾರ್‌ರಲ್ಲಿ ನಾಮಪತ್ರ ಸಲ್ಲಿಕೆ: ಮಂಗಳೂರು ತಹಶೀಲ್ದಾರ್‌ರಲ್ಲಿ ಪೂ.11ರಿಂದ ಅಪರಾಹ್ನ 3ರೊಳಗೆ ನಾಮಪತ್ರ ಸಲ್ಲಿಸಬಹುದು. ]ನ.7ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
*ಅಧಿಕಾರಿಗಳ ನೇಮಕ: ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಚುನಾವಣಾಧಿಕಾರಿಯಾಗಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಪ್ಪ ಎಂ. ಇವರನ್ನು ಉಪಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.