ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2016-11-08 12:37 GMT

ಮಂಗಳೂರು, ನ.8: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಅರ್ಹ ಬಡ, ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, 2016-17 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.

ಎಸೆಸೆಲ್ಸಿ ನಂತರ ವಿವಿಧ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ಅರ್ಹ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು

ಪೋಷಕರ/ಹೆತ್ತವರ ಮಾಸಿಕ ಆದಾಯವು 6 ಸಾವಿರ ರೂ.ಗಿಂತ ಕೆಳಗಿರಬೇಕು. ಪಿಯುಸಿ ವಿದ್ಯಾರ್ಥಿಗಳು ಶೇ. 70, ಪದವಿ ವಿದ್ಯಾರ್ಥಿಗಳು ಶೇ. 65, ಪ್ರೊಫೆಶನಲ್ ಕೋರ್ಸ್‌ಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಶೇ. 60 ಅಂಕ ಗಳಿಸಿರಬೇಕು. ಯತೀಮ್ ವಿದ್ಯಾರ್ಥಿಗಳಾಗಿದ್ದಲ್ಲಿ ಶೇ. 10 ಅಂಕಗಳ ರಿಯಾಯಿತಿ ಇದೆ.

ಅಗತ್ಯ ದಾಖಲೆಗಳು

ಇತ್ತೀಚೆಗಿನ ಎರಡು ಪಾಸ್‌ಪೋರ್ಟ್ ಸೈಝ್ ಫೋಟೊ. ಎಸೆಸೆಲ್ಸಿ ನಂತರದ ಎಲ್ಲಾ ಅಂಕಪಟ್ಟಿ. ರೇಷನ್ ಕಾರ್ಡ್‌ನ ಪ್ರತಿ. ಕಾಲೇಜಿನ ದೃಢೀಕರಣ ಪತ್ರದ ಮೂಲ ಪ್ರತಿ (ಒರಿಜಿನಲ್ ಸ್ಟಡಿ ಸರ್ಟಿಫಿಕೇಟ್). ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಪ್ರತಿ. ಫೀಸ್ ಕಟ್ಟಿದ ರಶೀದಿಯ ಝೆರಾಕ್ಸ್ ಪ್ರತಿ. ಈ ಎಲ್ಲಾ ದಾಖಲೆಗಳನ್ನು ಅಟೆಸ್ಟ್ ಮಾಡಿ, ಕಚೇರಿಯಲ್ಲಿ ಲಭ್ಯವಿರುವ ಅರ್ಜಿಯೊಂದಿಗೆ ನವೆಂಬರ್ 25ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ಕೆಝೆಡ್‌ಸಿಟಿ), 2ನೇ ಮಹಡಿ, ರೀಗಲ್ ಪಾರ್ಕ್ ಬಿಲ್ಡಿಂಗ್, ಜ್ಯೋತಿ ಸೈಕಲ್ ಕಂಪೆನಿಯ ಎದುರು, ಬಂದರ್, ಮಂಗಳೂರು. ಮೊಬೈಲ್ ಸಂಖ್ಯೆ 9611586611, 9611586613ಗಳಿಗೆ ಸಂಪರ್ಕಿಸಬಹುದು. ಅಥವಾ ಪುತ್ತೂರು ಕಚೇರಿ, ಮಿನಾರ್ ಕಾಂಪ್ಲೆಕ್ಸ್, ಟ್ರಾಫಿಕ್ ಪೊಲೀಸ್ ಸ್ಟೇಷನ್ ಹತ್ತಿರ, ಪುತೂರು. ಮೊಬೈಲ್ ಸಂಖ್ಯೆ 9481507808, ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News