3 ಸಾವಿರ ಕಾಂಡೋಮ್ ಶೋಧಿಸಬಲ್ಲವರಿಗೆ ಕಾಣೆಯಾದ ನಜೀಬ್‌ನನ್ನೇಕೆ ಹುಡುಕಲಾಗಿಲ್ಲ?

Update: 2016-11-08 14:05 GMT

ಹೊಸದಿಲ್ಲಿ, ನ.8: ಇಲ್ಲಿನ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ 24 ದಿನಗಳ ಹಿಂದೆ ಕಾಣೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ ಎಂಬಾತನ ಶೋಧಕ್ಕೆ ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕ್ಯಾಂಪಸ್‌ನಲ್ಲಿ 3 ಸಾವಿರ ಬಳಸಿದ ಕಾಂಡೋಮ್‌ಗಳನ್ನು ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗುತ್ತದೆ. ಆದರೆ, ಕಾಣೆಯಾಗಿರುವ ವಿದ್ಯಾರ್ಥಿಯೊಬ್ಬನ ಪತ್ತೆ ಅಸಾಧ್ಯವಾಗಿದೆ ಎಂದವರು ಲೇವಡಿ ಮಾಡಿದ್ದಾರೆ.‘ಬಿಹಾರ್ ಟು ತಿಹಾರ್’ ಎಂಬ ಅವರ ಪುಸ್ತಕದ ಬಿಡುಗಡೆಯ ವೇಳೆ ಕನ್ಹಯ್ಯ ಈ ರೀತಿ ಕಿಡಿಗಾರಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ. ಜೆಎನ್‌ಯು ಆವರಣದಲ್ಲಿ ಪ್ರತಿ ದಿನ ಸುಮಾರು 3 ಸಾವಿರ ಕಾಂಡೋಮ್‌ಗಳನ್ನು ಪತ್ತೆ ಮಾಡಬಹುದೆಂದು ಫೆಬ್ರವರಿಯಲ್ಲಿ ಹೇಳಿದ್ದ ಸಂಸದ ಜ್ಞಾನೇಂದ್ರ ಅಹುಜಾರನ್ನು ಅವರ ಈ ಹೇಳಿಕೆ ಗುರಿಯಿರಿಸಿತ್ತೆನ್ನಲಾಗಿದೆ.ಅವರಲ್ಲಿ ಅಷ್ಟು ಬುದ್ಧಿವಂತಿಕೆಯಿದೆ. ಜೆಎನ್‌ಯುನಲ್ಲಿ ಉಪಯೋಗಿಸಿದ ಕಾಂಡೋಮ್‌ಗಳನ್ನು ಅವರಿಂದ ಎಣಿಸಲು ಸಾಧ್ಯವಾಗಿದೆ. ಆದರೆ, ಇಷ್ಟು ದಿನಗಳಾದರೂ ನಜೀಬ್ ಎಲ್ಲಿದ್ದಾನೆಂದು ಹುಡುಕಲು ಅವರಿಂದ ಬುದ್ಧಿವಂತಿಕೆ ಉಪಯೋಗಿಸಲು ಸಾಧ್ಯವಾಗಿಲ್ಲವೆಂದು ದೇಶದ್ರೋಹದ ಆರೋಪದಲ್ಲಿ ಈ ವರ್ಷಾರಂಭದಲ್ಲಿ ಜೈಲು ಸೇರಿದ್ದ ಕನ್ಹಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News