ಎನ್‌ಡಿಟಿವಿ ಇಂಡಿಯಾ ನಿಷೇಧ : 5ಕ್ಕೆ ವಿಚಾರಣೆ ಮುಂದೂಡಿಕೆ

Update: 2016-11-08 14:13 GMT

ಹೊಸದಿಲ್ಲಿ, ನ.5: ಎನ್‌ಡಿಟಿವಿ ಇಂಡಿಯಾ ಸುದ್ದಿವಾಹಿನಿಗೆ ಒಂದು ದಿನ ನಿಷೇಧ ವಿಧಿಸುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಎನ್‌ಡಿಟಿವಿ ದಾಖಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ತಿಂಗಳು ನಡೆಸಲು ಸುಪ್ರೀಂ ಕೋರ್ಟ್ ಇಂದು ನಿರ್ಧರಿಸಿದೆ.

ನ.9ರಂದು ವಾಹಿನಿಯ ಪ್ರಸಾರ ನಿಷೇಧಿಸುವ ನಿರ್ಧಾರವನ್ನು ಸರಕಾರ ತಡೆಹಿಡಿದಿರುವುದರಿಂದ ಅರ್ಜಿಯ ವಿಚಾರಣೆಗೆ ಅವಸರವೇನೂ ಇಲ್ಲವೆಂದು ಎನ್‌ಡಿಟಿವಿಯ ಪರ ವಕೀಲ ಫಾಲಿ ಎಸ್. ನಾರಿಮನ್ ಹಾಗೂ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ತಿಳಿಸಿದ ಬಳಿಕ ಅದು ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಲು ನಿರ್ಧರಿಸಿತು.

ಅಂತಃ ಸಚಿವಾಲಯ ಸಮಿತಿಯು ಎನ್‌ಡಿಟಿಯ ಹೇಳಿಕೆಯನ್ನು ಆಲಿಸಿದೆ. ಸರಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅದು ಸಮಿತಿಗೆ ಮನವಿ ಮಾಡಿತ್ತೆಂದು ಅಟಾರ್ನಿ ಜನರಲ್, ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎನ್.ವಿ.ರಮಣರಿದ್ದ ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News