ಬಾಲಕಿಯ ಅತ್ಯಾಚಾರ: ಆರೋಪಿ ಬಂಧನ

Update: 2016-11-08 16:28 GMT

ಬೆಳ್ತಂಗಡಿ, ನ.8: ಬಾಲಕಿಯೋರ್ವಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ಉಜಿರೆಯಲ್ಲಿ ಬೆಳಕಿಗೆ ಬಂದಿದೆ. ಮಲವಂತಿಗೆ ಗ್ರಾಮದ ನಿವಾಸಿಯಾಗಿರುವ ಬಾಲಕಿಯ ಮೇಲೆ ಉಜಿರೆ ಹಳೆ ಪೇಟೆ ನಿವಾಸಿಯಾಗಿರುವ ಇಬ್ರಾಹೀಂ ಎಂಬಾತ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ಇಬ್ರಾಹೀಂನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News