×
Ad

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕಳವು

Update: 2016-11-08 23:18 IST

ಶಿರ್ವ, ನ.8: ಶಿರ್ವ ಕುತ್ಯಾರು ರಸ್ತೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಚಿನ್ನದ ಸರ ಕಳವು ಮಾಡಿರುವುದು ಸಿಸಿಟಿವಿಯಿಂದ ಪತ್ತೆಯಾಗಿದೆ.

ಅ.9ರಂದು ವಿವೇಕಾನಂದ ಆಚಾರ್ಯರ ಕೃಪಾ ಜ್ಯುವೆಲ್ಲರ್ಸ್‌ಗೆ ಕೆಂಪು ಬಣ್ಣದ ಅಪಾಚಿ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನ ಖರೀದಿಸುವ ನೆಪದಲ್ಲಿ ವಿವೇಕಾನಂದ ಆಚಾರ್ಯ ಚಿನ್ನವನ್ನು ತೋರಿಸಿ ತೂಕ ಮಾಡುತ್ತಿದ್ದಾಗ ಆತ ಚೈನ್ ಟ್ರೇಯಲ್ಲಿದ್ದ 1ಗ್ರಾಂ ತೂಕದ 28ಸಾವಿರ ರೂ. ವೌಲ್ಯದ ಸರವನ್ನು ಕಳವು ಮಾಡಿ ಹೋಗಿದ್ದಾನೆ. ಇದು ನ.7ರಂದು ಸಿಟಿಟಿವಿ ಪರಿಶೀಲನೆ ಮಾಡುವಾಗ ಪತ್ತೆಯಾಯಿತು.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News