ತ್ರಿವಳಿ ತಲಾಖ್, ಬಹುಪತ್ನಿತ್ವ ನಿಷೇಧಿಸಬೇಕು: ಸುಪ್ರೀಂಕೋರ್ಟ್ ಗೆ ರಾಷ್ಟ್ರೀಯಮಹಿಳಾ ಅಯೋಗ

Update: 2016-11-09 05:42 GMT

ಹೊಸದಿಲ್ಲಿ,ನ. 9: ತ್ರಿವಳಿತಲಾಕ್,ಬಹುಪತ್ನಿತ್ವ ನಿಷೇಧಿಸಬೇಕೆಂದು ಸುಪ್ರೀಂಕೋರ್ಟಿನಲ್ಲಿ ರಾಷ್ಟ್ರೀಯ ಮಹಿಳಾಆಯೋಗ ಅಫಿದಾವಿತ್ ಸಲ್ಲಿಸಿದೆ.ಮುಸ್ಲಿಂ ಮಹಿಳೆಯ ಹಕ್ಕನ್ನು ಈ ಆಚರಣೆಗಳು ನಿಷೇಧಿಸುತ್ತವೆ. ಆದ್ದರಿಂದ ಅವು ಸಂವಿಧಾನ ವಿರೋಧಿಯಾಗಿದೆ ಎಂದು ಮಹಿಳಾ ಆಯೋಗ ಅಫಿದಾವಿತ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವಿಷಯದಲ್ಲಿ ಕೇಂದ್ರ ಸರಕಾರ ಸ್ವೀಕರಿಸಿದ್ದ ನಿಲುವನ್ನೇ ಮಹಿಳಾ ಆಯೋಗವೂ ಬೆಂಬಲಿಸಿದಂತಾಗಿದೆ. ಪ್ರಕರಣದಲ್ಲಿ ಕಕ್ಷಿಯೆಂಬ ನೆಲೆಯಲ್ಲಿ ಆಯೋಗ ಕಳೆದ ಶನಿವಾರ ಅಫಿದಾವಿತ್ ಸಲ್ಲಿಸಿದೆ ಎಂದು ವರದಿಯಾಗಿದೆ.

ಏಕಪಕ್ಷೀಯವಾಗಿ ತಲಾಖ್ ಹೇಳಲಾದ ಮಹಿಳೆಯರಿಂದ ಹಲವಾರು ದೂರುಗಳು ಆಯೋಗಕ್ಕೆ ಲಭಿಸಿದ್ದು, ಇದರ ಆಧಾರದಲ್ಲಿ ಆಯೋಗ ತನ್ನ ನಿಲುವನ್ನು ಅಫಿದಾವಿತ್ ಮೂಲಕ ಸುಪ್ರೀಂಕೋರ್ಟಿಗೆ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಕೇಂದ್ರ ಸರಕಾರ ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿ ತ್ರಿವಳಿತಲಾಖ್ ಬಹುಪತ್ನಿತ್ವಗಳನ್ನು ನಿಷೇಧಿಸಬೇಕೆಂದು ಕೇಂದ್ರ ಸರಕಾರ ಆಗ್ರಹಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News