ನವಜಾತ ಶಿಶುವಿಗೆ ಎದೆಹಾಲು ನಿಷೇಧ ಪ್ರಕರಣ; ತಂದೆ, ತಂಙಳ್‌ಗೆ ಜಾಮೀನು

Update: 2016-11-09 06:35 GMT

ತಾಮರಶ್ಶೇರಿ, ನ. 9: ನವಜಾತ ಶಿಶುವಿಗೆ ಐದು ಅದಾನ್ ಕರೆ ಸಮಯ ಆಗದೆ ತಾಯಿಯ ಎದೆಹಾಲು ನಿಷೇಧಿಸಿದ ಘಟನೆಗೆ ಸಂಬಂಧಿಸಿ ಬಂಧಿಸಲಾಗಿದ ಶಿಶುವಿನ ತಂದೆ ಒಮಶ್ಶೇರಿ ಚಕ್ಕಾನಕಂಡಿ ಅಬೂಬಕರ್(32), ಸಲಹೆ ನೀಡಿದ ಹೈದ್ರೋಸ್ ತಂಙಳ್(75) ಇವರಿಗೆ ತಾಮರಶ್ಶೇರಿ ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಶರ್ತಬದ್ಧ ಜಾಮೀನು ನೀಡಿದ್ದಾರೆಂದು ವರದಿಯಾಗಿದೆ.

ಮೂರು ತಿಂಗಳು ಪ್ರತಿ ರವಿವಾರ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದುಗಂಟೆಯೊಳಗೆ ಮುಕ್ಕಂ ಪೊಲೀಸ್ ಠಾಣೆಯ ತನಿಖಾಧಿಕಾರಿಯ ಮುಂದೆ ಸಹಿಹಾಕಬೇಕು ಎಂಬ ಶರ್ತಮತ್ತು 10,000 ರೂ. ಬಾಂಡ್‌ನ ಆಧಾರದಲ್ಲಿ ಕೋರ್ಟು ಜಾಮೀನು ನೀಡಿದೆ. ಪ್ರಥಮ ಆರೋಪಿ ಶಿಶುವಿನ ತಾಯಿ ಅಫ್ಸತ್‌ರನ್ನು ಬಂಧಿಸಿಲ್ಲ. ಕಳೆದ ಬುಧವಾರ ಅಬೂಬಕರ್‌ರ ಪತ್ನಿ ಅಫ್ಸತ್ ಗಂಡು ಮಗುವಿಗೆ ಜನ್ಮನೀಡಿದ್ದರು. ಶಿಶುವಿಗೆ ಎದೆಹಾಲು ಕೊಡಲು ತಾಯಿ ನಿರಾಕರಿಸಿದ ಹಿನ್ನೆಲೆಯಲ್ಲಿ ಘಟನೆ ಬಹಿರಂಗವಾಗಿತ್ತು.

ವೈದ್ಯರು, ಆಸ್ಪತ್ರೆ ನೌಕರರು ಪೊಲೀಸರು ಎಷ್ಟೇ ಒತ್ತಾಯಿಸಿದರು ತಾಯಿ ಎದೆ ಹಾಲು ನೀಡಲು ಒಪ್ಪಿರಲಿಲ್ಲ. ವಿಷಯ ತಿಳಿದ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದಾಗ ತಂಙಳ್ ಐದು ಅದಾನ್ ಕರೆ ಆಗದೆ ಎದೆ ಹಾಲು ಕೊಡಬಾರದೆಂದು ಹೇಳಿರುವುದು ಬಹಿರಂಗವಾಗಿತ್ತು. ಕೊನೆಗೂ ಶಿಶುವಿಗೆ ತಂಙಳ್ ಹೇಳಿದಂತೆಯೇ ಐದು ಅದಾನ್ ಕರೆಆದ ಬಳಿಕ ಮರು ದಿನ ಮಧ್ಯಾಹ್ನನದ ನಂತರ ಮಗುವಿಗೆ ಎದೆಹಾಲನ್ನು ತಾಯಿ ನೀಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News