ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಿಲ್ಡಾ ರಾಯಪ್ಪನ್ ಕರೆ
Update: 2016-11-09 18:06 IST
ಮಂಗಳೂರು, ನ.9: ವಿದ್ಯಾರ್ಥಿ ಜೀವನ ಶ್ರೇಷ್ಠ ಜೀವನ. ಈ ಸಮಯದಲ್ಲಿ ಗಳಿಸಿದ ಜ್ಞಾನವೇ ನಮ್ಮ ಸಂಪತ್ತು. ಅದನ್ನು ಬೇರೆ ಯಾರೂ ಕಸಿಯಲು ಅಸಾಧ್ಯ. ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಪಟ್ಟ ಕಾನೂನು, ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರೊ. ಹಿಲ್ಡಾ ರಾಯಪ್ಪನ್ ಹೇಳಿದರು.
ನಗರದ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಚೈಲ್ಡ್‌ರೈಟ್ ಟ್ರಸ್ಟ್ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ವೇದಿಕೆಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚೈಲ್ಡ್ ರೈಟ್ ಟ್ರಸ್ಟ್‌ನ ನಿರ್ದೇಶಕ ಕಾರ್ಯಾಗಾರ ಉದ್ಫಾಟಿಸಿದರು. ಮುಖ್ಯ ಅತಿಥಿಯಾಗಿ ಡಾ.ಚಂದ್ರಕುಮಾರ್ ಭಾಗವಹಿಸಿದ್ದರು. ಯೋಜನೆಯ ಸಂಯೋಜಕ ವಿಲಿಯಂ ಸ್ಯಾಮುವೆಲ್ ಸ್ವಾಗತಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಈಶ್ವರ್ ವಂದಿಸಿದರು.