×
Ad

ದೇರಳಕಟ್ಟೆಯಲ್ಲಿ ಹುಖೂಕುಲ್ ಇಬಾದ್ ಸ್ನೇಹಸಮ್ಮಿಲನ

Update: 2016-11-09 19:43 IST

ದೇರಳಕಟ್ಟೆ, ನ. 9: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ದೇರಳಕಟ್ಟೆ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿ ಜಂಟಿ ಆಶ್ರಯದಲ್ಲಿ ಹುಖೂಕುಲ್ ಇಬಾದ್ (ಮನುಕುಲದ ಸೇವೆ) ಅಭಿಯಾನದ ಅಂಗವಾಗಿ ದೇರಳಕಟ್ಟೆ ರೇಂಜ್‌ಗೊಳಪಟ್ಟ ಉಲಮಾಗಳ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಪದಾಧಿಕಾರಿಗಳ ಸ್ನೇಹ ಸಮ್ಮಿಲನವು ಬೆಳ್ಮ ರೆಂಜಾಡಿಯ ಹಯಾತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಮಸ್ತ ಮುಶಾವರ ಕರ್ನಾಟಕ ಸದಸ್ಯರಾದ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಹಾಗೂ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಹುಖೂಖುಲ್ ಇಬಾದ್ ಬಗ್ಗೆ ತರಗತಿ ನಡೆಸಿದರು. ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ, ಕೋಶಾಧಿಕಾರಿ ಅಬ್ದರ್ರಹ್ಮಾನ್ ಪನೀರ್, ಸ್ಥಳೀಯ ಮದರಸ ಮುಖ್ಯೋಪಾಧ್ಯಾಯ ಶರೀಫ್ ದಾರಿಮಿ, ಮದ್ರಸ ಮ್ಯಾನೇಜ್‌ಮೆಂಟಿನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಹಾಗೂ ಉಪಾಧ್ಯಕ್ಷ ಹಾಜಿ ಎಂ.ಎ. ಅಬ್ದುಲ್ಲ ಉಪಸ್ಥಿತರಿದ್ದರು.

ಟ್ಯಾಲೆಂಟ್ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಯೋಜಕ ಅಸ್ಫರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ದೇರಳಕಟ್ಟೆ ರೇಂಜ್‌ಗಳ ಅನೇಕ ಮಸೀದಿಗಳ ಖತೀಬರು, ಸದರ್, ಮುಅಲ್ಲಿಮರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News