×
Ad

‘ಕೊಣಾಜೆ ಪಾಲಿಕ್ಲಿನಿಕ್, ಲ್ಯಾಬೊರೇಟರಿ ಮತ್ತು ಮೆಡಿಕಲ್’ ಉದ್ಘಾಟನೆ

Update: 2016-11-09 19:55 IST

ಮಂಗಳೂರು, ನ. 9: ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ನೂತನ ‘ಕೊಣಾಜೆ ಪಾಲಿಕ್ಲಿನಿಕ್, ಲ್ಯಾಬೊರೇಟರಿ ಮತ್ತು ಮೆಡಿಕಲ್’ನ್ನು ಇತ್ತೀಚೆಗೆ ಉದ್ಘಾಟನೆಗೊಂಡಿತು.

ಮಂಗಳೂರು ತಾ.ಪಂ. ಅಧ್ಯಕ್ಷ ಎಂ.ಟಿ.ಮೋನು ಮೆಡಿಕಲ್ ಸೌಲಭ್ಯ, ಜಿಲ್ಲಾ ಕುಷ್ಠ ರೋಗ, ಅಂಧತ್ವ ಮತ್ತು ಮಾನಸಿಕ ರೋಗ ಕಾರ್ಯಕ್ರಮ ಅಧಿಕಾರಿ ಡಾ.ರತ್ನಾಕರ ಅವರು ಪಾಲಿಕ್ಲಿನಿಕ್ ಹಾಗೂ ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಎ.ಎಂ.ಖಾನ್ ಲ್ಯಾಬೊರೇಟರಿಯನ್ನು ಉದ್ಘಾಟಿಸಿದರು.

ಮಂಜನಾಡಿ ಅಲ್ ಮದೀನಾ ಯತೀಂಖಾನಾದ ಅಧ್ಯಕ್ಷ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಫಾರ್ಮಾಸಿಯಲ್ಲಿ ಎಲ್ಲಾ ವಿಧದ ಅಲೋಪತಿಕ್ ಹಾಗೂ ಆಯುರ್ವೇದ ಔಷಧಿಗಳು ಲಭ್ಯವಿರುತ್ತದೆ. ಪಾಲಿಕ್ಲಿನಿಕ್‌ನಲ್ಲಿ ವಿಶೇಷ ಪರಿಣಿತರಾದ ವೈದ್ಯಕೀಯ, ಮಕ್ಕಳ, ಎಲುಬಿನ, ಕಿವಿ, ಮೂಗು, ಗಂಟಲಿನ, ಕಣ್ಣಿನ, ಚರ್ಮರೋಗದ ಹಾಗೂ ಶಸ್ತ್ರಕ್ರಿಯಾ ತಜ್ಞರು ಲಭ್ಯವಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಡಾ.ಮುಹಮ್ಮದ್ ಫಯಾಝ್ ಮತ್ತು ಡಾ.ಆಯಿಶಾ ಶಮ್ರೀನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News