×
Ad

ಚಿನ್ನದ ಬೆಲೆ 10 ಗ್ರಾಂಗೆ ರೂ. 34 ಸಾವಿರಕ್ಕೇರಿಕೆ

Update: 2016-11-09 20:14 IST

ಅಹ್ಮದಾಬಾದ್, ನ.9: ಸರಕಾರವು ರೂ. 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಜನರು ಆಭರಣದಂಗಡಿಗಳನ್ನು ಜೇನು ನೊಣಗಳಂತೆ ಮುತ್ತಿಕೊಂಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆ 10 ಗ್ರಾಂಗೆ ರೂ. 34 ಸಾವಿರಕ್ಕೇರಿದೆ.

ಅಘೋಷಿತ ಹಣವಿರುವ ಜನರು ಅದರ ವಿಲೇವಾರಿಗಾಗಿ, ನಿನ್ನೆ ರಾತ್ರಿ ನೋಟು ರದ್ದತಿಯ ಸುದ್ದಿ ಹೊರ ಬೀಳುತ್ತಿದ್ದಂತೆ ಚಿನ್ನ ಖರೀದಿಸಲು ದೌಡಾಯಿಸಿದರು. ಕೆಲವೇ ತಾಸುಗಳಲ್ಲಿ ಕೆಲವೇ ಚಿನ್ನಾಭರಣದಂಗಡಿಗಳಲ್ಲಿದ್ದ ನೋಂದಾಯಿತ ಚಿನ್ನವೆಲ್ಲ ಕಳ್ಳೇಪುರಿಯಂತೆ ಮಾರಾಟವಾಯಿತು. ಭಾರೀ ಬೇಡಿಕೆಯ ಕಾರಣ ನಿನ್ನೆ ರಾತ್ರಿ ಚಿನ್ನದ ಬೆಲೆ 10 ಗ್ರಾಂಗಳಿಗೆ ರೂ. 34 ಸಾವಿರಕ್ಕೇರಿತೆಂದು ಭಾರತದ ಹರಳು ಹಾಗೂ ಆಭರಣ ವ್ಯಾಪಾರ ಮಂಡಳಿಯ ಅಧ್ಯಕ್ಷ ಶಾಂತಿಭಾಯಿ ಪಟೇಲ್ ತಿಳಿಸಿದ್ದಾರೆ.

 ಆದಾಗ್ಯೂ, ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ಬಳಿಕ ಮಾರಾಟವಾದ ಚಿನ್ನ ಹಾಗೂ ಆಭರಣಗಳ ವೌಲ್ಯವನ್ನು ಅಂದಾಜು ಮಾಡುವುದು ಕಷ್ಟ. ಮಾರುಕಟ್ಟೆಯಲ್ಲಿ ಚಿನ್ನ ಲಭ್ಯವಿಲ್ಲವೆಂದು ಹೇಳಿ ಆಭರಣದಂಗಡಿಗಳು ಚಿನ್ನ ಮಾರಾಟವನ್ನು ನಿಲ್ಲಿಸಿದವೆಂದು ಅವರು ಹೇಳಿದ್ದಾರೆ.
ನಿನ್ನೆ ಗ್ರಾಹಕರ ಸಮ್ಮರ್ದವನ್ನು ನಿಭಾಯಿಸಲು ಚಿನ್ನದಂಗಡಿಗಳು ರಾತ್ರಿ 11ರವರೆಗೆ ತೆರೆದಿದ್ದವೆಂದು ಅಹ್ಮದಾಬಾದ್‌ನ ಆಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ರೋಹಿತ್ ಝವೇರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News