×
Ad

ಕನ್ನಡ ರಥ ವಿಶೇಷ ಪ್ರಚಾರಾಂದೋಲನ ಯಾತ್ರೆ ಉದ್ಘಾಟನೆ

Update: 2016-11-09 20:15 IST

ಮಂಗಳೂರು, ನ. 9: ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವದ ಪ್ರಯುಕ್ತ ನವೆಂಬರ್ 1ರಿಂದ 15 ದಿನಗಳ ಕಾಲ ರಾಜ್ಯಾದ್ಯಂತ ನಡೆಯುತ್ತಿರುವ ಕನ್ನಡ ರಥ ವಿಶೇಷ ಪ್ರಚಾರಾಂದೋಲನ ಯಾತ್ರೆಯು ಇಂದು ನಗರಕ್ಕೆ ಆಗಮಿಸಿದ್ದು, ಮೇಯರ್ ಹರಿನಾಥ್ ಪುರಭವನದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಾರ್ತಾಧಿಕಾರಿ ಖಾದರ್ ಶಾ, ಕಾರ್ಪೊರೇಟರ್ ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಮೇಯರ್ ಹರಿನಾಥ್ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಹಲವು ಮಹನೀಯರು ಮಾಡಿದ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು.

ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಆಂಗ್ಲ ವ್ಯಾಮೋಹ ಹೆಚ್ಚಿರುವ ಇಂದಿನ ಪರಿಸ್ಥಿತಿಯಲ್ಲಿ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಉಳಿಸೋಣ ಎಂದರು. ತುಳುವರಾಗಿ ಬದುಕೋಣ ಆದರೆ, ಕರ್ನಾಟಕ ರಾಜ್ಯದಿಂದ ಪ್ರತ್ಯೇಕವಾಗುವ ಚಿಂತನೆ ಬೇಡ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News