×
Ad

ನಾಳೆ ರಬ್ಬರ್ ಬೆಳೆಗಾರರ ಸಮಾವೇಶ

Update: 2016-11-09 23:55 IST

ಮಂಗಳೂರು, ನ.9: ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಮಾವೇಶ ನ.11ರಂದು ಪುತ್ತೂರು ಜೈನ ಭವನದಲ್ಲಿ ಏರ್ಪಡಿಸಲಾಗಿದೆ. ಪೂರ್ವಾಹ್ನ 11ಗಂಟೆಗೆ ಕೇಂದ್ರ ಸರಕಾರದ ರಬ್ಬರ್ ಮಂಡಳಿ ಅಧ್ಯಕ್ಷ ಅಜಿತ್ ಕುಮಾರ್ ಉದ್ಘಾಟಿಸಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ರಬ್ಬರ್‌ಬೆಳೆಗಾರರ ಸಂಘ (ಕೃಪಾ)ದ ಅಧ್ಯಕ್ಷ ಕರ್ನಲ್ ಎಸ್. ಶರತ್ ಭಂಡಾರಿ ಮಾಹಿತಿ ನೀಡಿದರು.

  

 2012ರಲ್ಲಿದ್ದ ರಬ್ಬರ್ ಕೆ.ಜಿ.ಯೊಂದರ ದರ 245 ರೂ. , ಪ್ರಸ್ತುತ 116ರ ರೂ. ಆಸುಪಾಸಿನಲ್ಲಿದೆ. ಸಮಾವೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ನೀಡದೆ ಬಾಕಿ ಉಳಿದ ರಬ್ಬರ್ ಕೃಷಿಕರ ಧನಸಹಾಯ, ದೀರ್ಘಕಾಲದಿಂದ ರಬ್ಬರ್ ಬೆಲೆ ಕುಸಿತ, ಮತ್ತಿತರ ರಬ್ಬರ್ ಕೃಷಿಕರ ಸಮಸ್ಯೆಗಳ ಕುರಿತಾಗಿ ಬೆಳೆಗಾರರಿಗೆ ರಬ್ಬರ್ ಮಂಡಳಿ ಅಧ್ಯಕ್ಷರೊಂದಿಗೆ ಚರ್ಚೆ, ಸಂವಾದ ನಡೆಸಲು ಅವಕಾಶ ನೀಡಲಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೃಪಾ ಕಾರ್ಯದರ್ಶಿ ಪಿ.ಗೋಪಾಲಕೃಷ್ಣ ಭಟ್, ರಬ್ಬರು ಮಂಡಳಿ ಅಧಿಕಾರಿ ಬಾಲಕೃಷ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News