×
Ad

ನೋಟುಗಳ ವಿನಿಮಯಕ್ಕೆ ಬ್ಯಾಂಕ್‌ಗಳ ಮುಂದೆ ಜನರ ನೂಕುನುಗ್ಗಲು

Update: 2016-11-10 10:17 IST

ಹೊಸದಿಲ್ಲಿ,ನ.10: ನೋಟುಗಳ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಜನರು ಬ್ಯಾಂಕ್ ಶಾಖೆಗಳ ಮುಂದೆ ಗುರುತಿನ ಚೀಟಿ ಹಿಡಿದು ಉದ್ದದ ಸರತಿ ಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ಬೆಂಗಳೂರು, ಮುಂಬೈ, ದಿಲ್ಲಿ ಸಹಿತ ದೇಶದೆಲ್ಲೆಡೆ ಕಂಡುಬಂದಿದೆ.

 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದ ಮಂಗಳವಾರ ರಾತ್ರಿ ಘೋಷಿಸಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಬಳಿಯಿರುವ ಹಳೆಯ 500 ಹಾಗೂ 1000 ರೂ. ನೋಟುಗಳ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಜಮಾಯಿಸಿದ್ದಾರೆ. ಪ್ರತಿದಿನ ಗರಿಷ್ಠ 4000 ರೂ.ವರೆಗೆ ನೋಟು ವಿನಿಮಯ ಮಾಡಿಕೊಳ್ಳಬಹುದು. ಇಂದು 500 ಹಾಗೂ 2000 ರೂ. ಮುಖಬೆಲೆಯ ಹೊಸ ನೋಟುಗಳು ಜಾರಿಗೆ ಬರಲಿವೆ.

 ಜನದಟ್ಟಣೆಯನ್ನು ನಿಭಾಯಿಸಲು ಶನಿವಾರ ಹಾಗೂ ರವಿವಾರ ಕೂಡ ಬ್ಯಾಂಕ್‌ಗಳನ್ನು ತೆರೆದಿಡುವಂತೆ ಸರಕಾರ ಆದೇಶ ನೀಡಿದೆ. ಬೆಳಗ್ಗೆ 10 ರಿಂದ ಸಂಜೆ 6ರ ತನಕ ಬ್ಯಾಂಕ್ ತೆರೆದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News