ಬ್ಯಾಂಕ್ ಗಳಿಗೆ ತಲುಪದ ಹೊಸ ಕರೆನ್ಸಿ: ಜನರ ಪರದಾಟ
Update: 2016-11-10 10:22 IST
ಮಂಗಳೂರು, ನ.10: 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟ್ ಗಳ ಬದಲಾವಣೆಗಾಗಿ ಜನರು ಬ್ಯಾಂಕ್ ಗಳ ಮುಂದೆ ಜಮಾಯಿಸಿದ್ದಾರೆ. ಆದರೆ ನಗರದ ಹಲವು ಬ್ಯಾಂಕ್ ಶಾಖೆಗಳಿಗೆ ಇನ್ನೂ ಕೂಡಾ ಹೊಸ ಕರೆನ್ಸಿ ನೋಟ್ ಗಳು ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ಆಗಮಿಸಿರುವ ಜನರು ಪರದಾಡುತ್ತಿದ್ದಾರೆ.
ಹೊಸ ನೋಟ್ ಗಳನ್ನು ಪಡೆಯಲು ಬೆಳಗ್ಗೆಯಿಂದಲೇ ಜನರು ಬ್ಯಾಂಕ್ ಗಳು ಮತ್ತು ಅಂಚೆಕಚೇರಿಗಳ ಮುಂದೆ ಜನರು ಜಮಾಯಿಸಿದ್ದಾರೆ. ಆದರೆ ಬ್ಯಾಂಕ್ ಗಳಿಗೆ ಹೊಸ ಕರೆನ್ಸಿ ಇನ್ನೂ ತಲುಪದ ಕಾರಣ ಸಮಸ್ಯೆ ಎದುರಾಗಿದೆ. ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ಬ್ಯಾಂಕ್ ಗಳ ಸಿಬ್ಬಂದಿ ಹೊಸ ನೋಟ್ ವಿತರಣೆಗೆ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ನೋಟ್ ಗಳು ಬಂದ ಕೂಡಲೇ ವಿತರಣೆ ಆರಂಭಿಸಲಾಗುವುದು ಎಂದು ಬ್ಯಾಂಕ್ ನ ಅಧಿಕಾರಿಗಳು ತಿಳಿಸಿದ್ದಾರೆ.