×
Ad

ಟಿಪ್ಪು ಜಯಂತಿಗೆ ವಿರೋಧ: ಬಿಜೆಪಿಗರಿಂದ ಕಪ್ಪುಬಾವುಟ ಪ್ರದರ್ಶನ

Update: 2016-11-10 10:43 IST

ಮಂಗಳೂರು, ನ.10: ಸರಕಾರದ ವತಿಯಿಂದ ನಡೆಯುತ್ತಿರುವ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿಗರು ಕಪ್ಪುಬಾವುಟ ಪ್ರದರ್ಶಿಸಿದರು. ಬಿಜೆಪಿ ಕಾರ್ಯಕರ್ತರು ಟಿಪ್ಪುಜಯಂತಿ ಆಚರಣೆ ನಡೆಯುತ್ತಿದ್ದ ಜಿ.ಪಂ. ಸಭಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

ಟಿಪ್ಪು ಜಯಂತಿಗೆ ಮುಂಚಿತವಾಗಿ ಪ್ರತಿಭಟನೆ ನಡೆಸಿದ 129 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಕಮೀಶನರ್ ಚಂದ್ರಶೇಖರ್ ತಿಳಿಸಿದ್ದಾರೆ.

ಮನ್ನೆಚ್ಚರಿಕೆ ಹಾಗೂ ಕಣ್ಗಾವಲಿಗಾಗಿ ಪ್ರತಿಭಟನೆಯ ಆವರಣದಲ್ಲಿ ಜಿಲ್ಲೆಯ ಗಡಿ ಪ್ರದೇಶ ಸೇರಿದಂತೆ ಒಟ್ಟು ನಾಲ್ಕು ಡ್ರೋಣ್‌ಗಳನ್ನು ಬಳಸಲಾಗಿತ್ತು. ತನ್ನ ವರ್ತುಲದಲ್ಲಿ ಸುಮಾರು 5 ಕಿ.ಮೀ ವ್ಯಾಪ್ತಿಯ ಚಿತ್ರಗಳನ್ನು ಡ್ರೋಣ್ ಮೂಲಕ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಾಲ್ಕು ಡ್ರ್ರೋಣ್‌ಗಳನ್ನು ಬಳಸಲಾಗಿದೆ. ಈ ಹಿಂದೆ ಶಾರದೋತ್ಸವದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎರಡು ಡ್ರೋಣ್‌ಗಳನ್ನು ಬಳಸಲಾಗಿತ್ತು ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮೂಲಕ ಡ್ರೋಣ್ ಸೌಲಭ್ಯವನ್ನು ಪೊಲೀಸ್ ಇಲಾಖೆಗೆ ಗುತ್ತಿಗೆ ಪಡೆಯಲಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ, ಗಣೇಶ್ ಕಾರ್ಣಿಕ್ ಮಾಜಿ ಶಾಸಕ ಮೋನಪ್ಪ ಭಂಡಾರಿ ಹಾಗೂ ಕೆಲವು ಬಿಜೆಪಿ ಪಕ್ಷದ ಮನಪಾ ಸದಸ್ಯರು ,ಜಿಲ್ಲಾ ಪಂಚಾಯತ್ ಎದುರು ಕರಿಪತಾಕೆ ಹಿಡಿದು ಪ್ರತಿಭಟನೆ ನಡೆಸಿ, ಪೊಲೀಸರ ಬಂನಕ್ಕೊಳಗಾದರು. ಮನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News