ಪ್ರಥಮ ಟೆಸ್ಟ್: ಇಂಗ್ಲೆಂಡ್ 504/8

Update: 2016-11-10 07:57 GMT

 ರಾಜ್‌ಕೋಟ್, ನ.10: ಜೋ ರೂಟ್, ಮೊಯಿನ್ ಅಲಿ ಹಾಗೂ ಬೆನ್ ಸ್ಟೋಕ್ಸ್ ಸಿಡಿಸಿದ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ 143 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 504 ರನ್ ಗಳಿಸಿದೆ.

ಎರಡನೆ ದಿನವಾದ ಗುರುವಾರ 4 ವಿಕೆಟ್ ನಷ್ಟಕ್ಕೆ 311 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್‌ನ ಪರ ಬೆನ್ ಸ್ಟೋಕ್ಸ್(ಅಜೇಯ 120, 195 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಅನ್ಸಾರಿ(ಅಜೇಯ 13)9ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 41 ರನ್ ಸೇರಿಸಿದರು.

99 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಅಲಿ 195 ಎಸೆತಗಳಲ್ಲಿ ನಾಲ್ಕನೆ ಶತಕ ಪೂರೈಸಿದರು. 213 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 117 ರನ್ ಗಳಿಸಿದ್ದ ಅಲಿ ವೇಗದ ಬೌಲರ್ ಮುಹಮ್ಮದ್ ಶಮಿಗೆ ಕ್ಲೀನ್‌ ಬೌಲ್ಡಾದರು.

ಅಲಿ ಔಟಾದ ಬಳಿಕ 6ನೆ ವಿಕೆಟ್‌ಗೆ 99 ರನ್ ಸೇರಿಸಿದ ಸ್ಟೋಕ್ಸ್ ಹಾಗೂ ಬೈರ್‌ಸ್ಟೋ ತಂಡದ ಮೊತ್ತವನ್ನು 442ಕ್ಕೆ ತಲುಪಿಸಿದರು.

ಸ್ಟೋಕ್ಸ್ 173 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ಸಹಿತ ಶತಕ ಪೂರೈಸಿದರು.

ಭಾರತದ ಪರ ರವೀಂದ್ರ ಜಡೇಜ(3-86) ಯಶಸ್ವಿ ಬೌಲರ್ ಎನಿಸಿಕೊಂಡರು. ಅಶ್ವಿನ್ ಹಾಗೂ ಶಮಿ ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News