×
Ad

ಮಂಗಳೂರು: ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

Update: 2016-11-10 19:47 IST

ಮಂಗಳೂರು, ನ.10: ಮಂಗಳೂರು ಮಹಾನಗರಪಾಲಿಕೆಯ ಕೋರ್ಟ್ ವಾರ್ಡ್ ವ್ಯಾಪ್ತಿಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಿದ ಪ್ಲಾಂಟರ್ಸ್ ಲೇನ್ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.

ಸುಮಾರು 2 ದಶಕಗಳಿಂದ ರೈಲ್ವೆಕಾಲನಿಯ ಜನರು ಶಿಥಿಲಗೊಂಡ ಒಳಚರಂಡಿ ವ್ಯವಸ್ಥೆಯಿಂದ ಕಷ್ಟ ಅನುಭವಿಸಿದ್ದರು. ಆ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಿಂದ ರೈಲ್ವೆ ಕಾಲನಿ ಮುಖಾಂತರ ರೈಲ್ವೆ ನಿಲ್ದಾಣದರೆಗೆ ಮತ್ತು ಪೊಲೀಸ್ ಲೇನ್ ಕಾಲನಿಯಿಂದ ರೈಲು ನಿಲ್ದಾಣದವರೆಗಿನ ಒಳಚರಂಡಿ ವ್ಯವಸ್ಥೆಯನ್ನು 70 ಲಕ್ಷ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದೆ. ಮುತ್ತಪ್ಪನ್ ದೇವಸ್ಥಾನದ ರಸ್ತೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಕಾರ್ಪೊರೇಟರ್ ಎ.ಸಿ.ವಿನಯರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News