ಆರೆಸ್ಸೆಸ್ ಕಾರ್ಯಕರ್ತನ ಕೊಲೆಯತ್ನ: ಸಚಿವ ಖಾದರ್ ಖಂಡನೆ
Update: 2016-11-10 23:02 IST
ಮಂಗಳೂರು, ನ. 10: ಕುತ್ತಾರು ಸಮೀಪ ಇಂದು ಸಂಜೆ ರಾಮಮೋಹನ ಎಂಬವರ ಮೇಲೆ ನಡೆದ ಹಲ್ಲೆಯನ್ನು ಆಹಾರ ಸಚಿವ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಘಟನೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದು, ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.