×
Ad

ಅಮೆರಿಕದ ನೂತನ ಅಧ್ಯಕ್ಷರಿಗೆ ಉತ್ತರ ಕೊರಿಯದ ಆಗ್ರಹ ಏನು ನೋಡಿ ?

Update: 2016-11-10 23:19 IST

ಸಿಯೋಲ್, ನ. 10: ತನ್ನನ್ನು ಪರಮಾಣು ಶಕ್ತ ದೇಶ ಎಂಬುದಾಗಿ ಅಮೆರಿಕ ಪರಿಗಣಿಸಬೇಕು ಎಂಬುದಾಗಿ ಉತ್ತರ ಕೊರಿಯ ಗುರುವಾರ ಪ್ರತಿಪಾದಿಸಿದೆ.
ಉತ್ತರ ಕೊರಿಯದ ಕಿಮ್ ಜಾಂಗ್ ಉನ್ ಸರಕಾರ ನೀಡಿದ ಹೇಳಿಕೆಯೊಂದು, ಅಧ್ಯಕ್ಷ ಬರಾಕ್ ಒಬಾಮರ ವಿಫಲ ನೀತಿಗಳನ್ನು ತ್ಯಜಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ.

ಆದಾಗ್ಯೂ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿರುವ ಪ್ರಸ್ತಾಪವನ್ನು ಹೇಳಿಕೆಯಲ್ಲಿ ಮಾಡಲಾಗಿಲ್ಲ.
‘‘ಉತ್ತರ ಕೊರಿಯವನ್ನು ನೈಜ ಪರಮಾಣು ಶಕ್ತ ದೇಶ ಎಂಬುದಾಗಿ ಅಮೆರಿಕ ಅಧಿಕೃತವಾಗಿ ಗುರುತಿಸಬೇಕು ಹಾಗೂ ಇತರ ಪರಮಾಣು ಶಕ್ತ ದೇಶಗಳ ವಿಷಯದಲ್ಲಿ ಅನುಸರಿಸುವ ನೀತಿಯನ್ನೇ ಅದರೊಂದಿಗೂ ಅನುಸರಿಸಬೇಕು’’ ಎಂದು ಸರಕಾರಿ ಒಡೆತನದ ಕೆಸಿಎನ್‌ಎಯಲ್ಲಿ ಪ್ರಕಟಗೊಂಡ ಸಂಪಾದಕೀಯದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News