ಆಳ್ವಾಸ್ ನುಡಿಸಿರಿಯಲ್ಲಿ ’ರಂಗಸಿರಿ’

Update: 2016-11-11 13:35 GMT

ಮೂಡುಬಿದಿರೆ, ನ.11: ನ.18ರಿಂದ 20ರವರೆಗೆ ಮೂಡುಬಿದಿರೆಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗವಾಗಿ ಕನ್ನಡ ರಂಗಭೂಮಿಯ ನಾಲ್ಕು ಪ್ರಮುಖ ನಾಟಕಗಳ ಪ್ರದರ್ಶನ ’ರಂಗಸಿರಿಯನ್ನು’ ಪ್ರತಿದಿನ 6:45ಕ್ಕೆ ವಿದ್ಯಾಗಿರಿಯ ಆಳ್ವಾಸ್ ಪದವಿ ಕಾಲೇಜು ಆವರಣದಲ್ಲಿ ಹಾಕಲಾದ ಡಾ.ಶಿವರಾಮಕಾರಂತ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ನುಡಿಸಿರಿಯ ಹಿಂದಿನ ದಿನ ನ.17ರಂದು ರಂಗಾಯಣ ದಾರವಾಢ ಅಭಿನಯದ ನಾಟಕ ’ತಮಾಶಾ’ (ನಿರ್ದೇಶನ:ಪ್ರೊ:ಗಣೇಶ ಚಂದಶಿವೆ, ಮುಂಬಯಿ), ನ.18ರಂದು ರಂಗಾಯಣ, ಮೈಸೂರು ಅಭಿನಯಿಸುವ ಡಾ.ಗಿರೀಶ್‌ಕಾರ್ನಾಡ್ ರಚಿಸಿರುವ ನಾಟಕ ’ತಲೆದಂಡ’(ನಿ: ಜಯತೀರ್ಥ ಜೋಶಿ) ನ.19ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ) ಅಭಿನಯದ ಡಾ.ಚಂದ್ರಶೇಖರ ಕಂಬಾರ ರಚಿಸಿರುವ ಜಾನಪದ ನಾಟಕ ’ಮಹಾಮಾಯಿ’(ನಿರ್ದೇಶನ: ಜೀವನ್‌ರಾಂ ಸುಳ್ಯ) ಮತ್ತು ನ.20ರಂದು ರಂಗಮಂಟಪ, ಬೆಂಗಳೂರು ಅಭಿನಯಿಸುವ ವೈದೇಹಿ ಕಥೆಯಾಧಾರಿತ ನಾಟಕ ’ಅಕ್ಕು’ (ರಚನೆ:ಕಾಶೀನಾಥ್ ಪತ್ತಾರ್, ನಿ:ಚಂಪಾಶೆಟ್ಟಿ) ಪ್ರದರ್ಶನಗೊಳ್ಳಲಿದೆ ಎಂದು ಆಳ್ವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News