×
Ad

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Update: 2016-11-12 00:20 IST

ಕೊಲ್ಲೂರು, ನ.11: ವೈಯಕ್ತಿಕ ಕಾರಣದಿಂದ ಮನನೊಂದ ಹಕ್ಲಾಡಿಯ ಭಾಸ್ಕರ ಪೂಜಾರಿ ಎಂಬವರು ಗುರುವಾರ ರಾತ್ರಿ ಜಡ್ಕಲ್ ಗ್ರಾಮದ ಮೆಕ್ಕೆ ಎಂಬಲ್ಲಿ ಗೂಡಂಗಡಿಯ ಎದುರು ಸಿಟೌಟಿನ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಸ್ಕರ ಪೂಜಾರಿ 12 ವರ್ಷಗಳ ಹಿಂದೆ ಸರೋಜಾ ಎಂಬವರನ್ನು ಮದುವೆಯಾಗಿದ್ದು, ಅವರಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರರಿದ್ದಾರೆ. ಐದಾರು ವರ್ಷಗಳ ಹಿಂದೆ ಇವರಿಬ್ಬರಲ್ಲಿ ಮನಸ್ತಾಪ ಉಂಟಾಗಿ ಸರೋಜಾ ಗಂಡು ಮಗುವಿನ ಜೊತೆ ಪ್ರತ್ಯೇಕವಾಗಿ ವಾಸಮಾಡಿಕೊಂಡಿದ್ದರು. ಭಾಸ್ಕರ್ ಪೂಜಾರಿ ಹೆಣ್ಣು ಮಗುವನ್ನು ತನ್ನ ಮನೆಯಾದ ಹಕ್ಲಾಡಿಯಲ್ಲಿ ಬಿಟ್ಟು ಜಡ್ಕಲ್‌ನಲ್ಲಿರುವ ಸರೋಜರ ಸಹೋದರನ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News