ಕರಾಟೆ: ಸಾತ್ವಿಕ್ ಶರ್ಮಾಗೆ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ
Update: 2016-11-12 10:32 IST
ಪುತ್ತೂರು, ನ.12: ಹೈದರಾಬಾದ್ ನ ವಿಜಯ ಭಾಸ್ಕರ ರೆಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ 34ನೆ ಆಲ್ ಇಂಡಿಯಾ ಕರಾಟೆ ಫೆಡರೇಶನ್ (ಎಐಬಿಕೆಎಫ್) ಕರಾಟೆ ಚಾಂಪಿಯನ್ ಶಿಫ್ ನಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೆ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಶರ್ಮ ವಿಜೇತರಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಸಾತ್ವಿಕ್ ಶರ್ಮ ಬ್ಲಾಕ್ ಬೆಲ್ಟ್ 14ರ ವಯಸ್ಸಿನ ಮೇಲ್ಮಟ್ಟದ 40-45 ಕೆ.ಜಿ ವಿಭಾಗದ ಕುಮಿಟಿಯಲ್ಲಿ ಚಿನ್ನದ ಪದಕ ಹಾಗೂ 14ರ ಮೇಲ್ಮಟ್ಟದ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಅವರು ಇನ್ಸಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲ್ಮೆಡ್ ಆರ್ಟ್ ಪುತ್ತೂರು ಡೋಜೋದ ಎಂ. ಸುರೇಶ್ ಅವರ ಶಿಷ್ಯರಾಗಿದ್ದು, ರಾಜೇಶ್ ಶರ್ಮ ಮತ್ತು ಸೀಮಾ ಶರ್ಮ ದಂಪತಿಗಳ ಪುತ್ರ