ಪಾಕಿಸ್ತಾನದಲ್ಲಿ 1000, 5000 ನೋಟು ನಿಷೇಧಕ್ಕೆ ಚಿಂತನೆ
Update: 2016-11-12 12:52 IST
ಕರಾಚಿ, ನ.12: ಭಾರತದಲ್ಲಿ ಐನೂರು ಮತ್ತು ಸಾವಿರ ರೂ.ಗಳ ನೋಟುಗಳ ಬಳಕೆಯನ್ನು ಕೇಂದ್ರ ಸರಕಾರ ನಿಷೇಧಿಸಿರುವ ಬೆನ್ನಲ್ಲೆ ಪಾಕಿಸ್ತಾನದಲ್ಲಿ ಅಲ್ಲಿನ ಸರಕಾರ 1000 ಮತ್ತು 5000 ರೂ.ಗಳ ನೋಟುಗಳ ಬಳಕೆಯನ್ನು ನಿಷೇಧಿಸುವ ಚಿಂತನೆ ನಡೆಸಿದೆ.
ಭಾರತದಲ್ಲಿ 500 ಮತ್ತು 1,000 ರೂ. ನೋಟುಗಳ ಬಳಕೆ ನಿಷೇಧಿಸಿದ ಬಳಿಕ ಅಕ್ರಮ ಹಣ ಸಂಪಾದನೆ, ಭ್ರಷ್ಟಾಚಾರವನ್ನು ತಡೆಯಲು ಪಾಕಿಸ್ತಾನ 1000 ಮತ್ತು 5000 ರೂ.ಗಳ ನೋಟು ಗಳನ್ನು ಬದಲಾಯಿಸಬೇಕು ಎಂದು ಅಲ್ಲಿನ ಸೆನೆಟ್ ಸದಸ್ಯರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸೆನೆಟ್ ಸದಸ್ಯರ ಸಲಹೆಯಂತೆ ಸರಕಾರವು ಈ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಕೇಂದ್ರ ಸರಕಾರ ಕಪ್ಪು ಹಣವನ್ನು ಹೊರತರಲು ಕಳೆದ ಮಂಗಳವಾರ ತಡರಾತ್ರಿಯಿಂದಲೇ 500 ರೂ. ಹಾಗೂ 1,000 ರೂ. ನೋಟುಗಳ ಬಳಕೆಗೆ ನಿಷೇಧ ಹೇರಿತ್ತು.