×
Ad

ಮನಿ ಸರ್ಜಿಕಲ್ ಸ್ಟ್ರೈಕ್ ಗೆ ಉಡುಪಿಯಲ್ಲಿ ಓರ್ವ ಬಲಿ

Update: 2016-11-12 13:35 IST

ಉಡುಪಿ, ನ.12:  ನೋಟು ಬದಲಾಯಿಸಲು ಬಂದಿದ್ದ ವೃದ್ಧರೊಬ್ಬರು ಬ್ಯಾಂಕ್ ಆವರಣದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಕಾರ್ಪೋರೇಶನ್ ಬ್ಯಾಂಕ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಗೋಪಾಲಶೆಟ್ಟಿ(96) ಎಂಬವರೇ ಮೃತಪಟ್ಟವರು. ಇವರು ನೋಟು ಬದಲಾಯಿಸಲು ಅಜೆಕಾರು ಕಾರ್ಪೋರೇಶನ್ ಬ್ಯಾಂಕ್ ಗೆ ಬಂದಿದ್ದರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಸಿಲಿನ ಬೇಗೆಗೆ ತೀವ್ರವಾದ ರಕ್ತದೊತ್ತಡ ಕಾಣಿಸಿಕೊಂಡು ಬ್ಯಾಂಕ್ ಆವರಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 

ಇವರು ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸ್ಥಾಪಕ ಸುಧಾಕರ ಶೆಟ್ಟಿಯವರ ತಂದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News