ಮಂಗಳೂರಿನಲ್ಲಿ ಮದ್ರಸ ಶಿಕ್ಷಕರ ಬೃಹತ್ ಪಾದಯಾತ್ರೆ
Update: 2016-11-12 15:12 IST
ಮಂಗಳೂರು, ನ.12: ಸುನ್ನಿ ಎಜುಕೇಶನಲ್ ಡೆವಲಪ್‌ಮೆಂಟ್ ಕಮಿಟಿ ಆಫ್ ಕರ್ನಾಟಕ (ಎಸ್‌ಇಡಿಸಿ) ಇದರ 15ನೆ ವಾರ್ಷಿಕದ ಸಮಾರೋಪದ ಅಂಗವಾಗಿ ಮದ್ರಸದ ಶಿಕ್ಷಕರು ಶನಿವಾರ ಪಾದಯಾತ್ರೆ (ಮುಅಲ್ಲಿಂ ಮಸೀರ) ನಡೆಸಿದರು. ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಪಾದಯಾತ್ರೆಗೆ ದುಆ ಮೂಲಕ ಚಾಲನೆ ನೀಡಲಾಯಿತು. ಸಾವಿರಾರು ಮದ್ರಸ ಶಿಕ್ಷಕರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.