ಮದ್ಯ ಖರೀದಿಗೆ ಚಿಲ್ಲರೆ ಸಿಗದೆ 1000 ರೂ. ನೋಟು ಹರಿದ ಯುವಕ
Update: 2016-11-12 18:29 IST
ಮಂಜೇಶ್ವರ,ಅ.12 : ಮದ್ಯ ಖರೀದಿಸಲು ತೆರಳಿದ ಯುವಕನೊಬ್ಬನಿಗೆ ಒಂದು ಸಾವಿರ ರೂ. ನ ಚಿಲ್ಲರೆ ಸಿಗದೇ ಇದ್ದ ಕೋಪದಲ್ಲಿ ಮದ್ಯದಂಗಡಿಯ ಮುಂದೆ ಜಮಾಯಿಸಿದ ಜನರ ಮದ್ಯದಲ್ಲಿಯೇ ನೋಟನ್ನು ಹರಿದು ಬಿಸಾಡಿ ಅಲ್ಲಿಂದ ತೆರಳಿದ ಘಟನೆಗೂ ಬದಿಯಡ್ಕ ನಗರ ಸಾಕ್ಷಿಯಾಯಿತು.
ಬದಿಯಡ್ಕ ಬಿವರೇಜಸ್ ಮದ್ಯದಂಗಡಿ ಪರಿಸರದಲ್ಲಿ ಈ ಘಟನೆ ಶುಕ್ರವಾರ ಸಂಜೆ ನಡೆದಿದೆ.ಎರಡು ಸಲ ಮದ್ಯ ಖರೀದಿಸಲು ಬಂದಾಗಲೂ 1000 ರೂ. ನೋಟನ್ನು ತೆಗೆದುಕೊಳ್ಳುವುದಿಲ್ಲವೆಂದೂ, ಚಿಲ್ಲರೆ ಕೊಟ್ಟರೆ ಮಾತ್ರ ಮದ್ಯ ಕೊಡುವುದಾಗಿ ಬಿವರೇಜಸ್ ಅಧಿಕೃತರು ಹೇಳಿದ್ದರು. ಇದರಿಂದ ಕುಪಿತನಾದ ಯುವಕನಿಗೆ ಮದ್ಯ ಅನಿವಾರ್ಯವಾಗಿತ್ತು. ಬ್ಯಾಂಕ್‌ನ ಸರದಿಯಲ್ಲಿ ನಿಲ್ಲುವಷ್ಟು ಸಹನೆಯೂ ಇರಲಿಲ್ಲ. ಇದರಿಂದ ಬಿವರೇಜಸ್ ಮುಂಬಾಗದಲ್ಲೇ ಸಾವಿರ ರೂ. ನ ನೋಟನ್ನು ಅಲ್ಲೇ ಹರಿದು ಬಿಸಾಡಿ ಯುವಕ ಪರಾರಿಯಾಗಿದ್ದಾನೆ. ಹರಿದು ಹಾಕಿದ ನೋಟಿನ ತುಂಡುಗಳು ಮದ್ಯದಂಗಡಿ ಮುಂಬಾಗದಲ್ಲಿ ಗಾಳಿಗೆ ಅನಾಥವಾಗಿ ಹಾರುತಿತ್ತು.