×
Ad

ನ್ಯಾಯಾಧೀಶ ವಿ. ಕೆ ಉಣ್ಣಿ ಕೃಷ್ಣನ್ ಆತ್ಮಹತ್ಯೆ ಪ್ರಕರಣ : ನ್ಯಾಯಾಂಗ ತನಿಖೆಗೆ ಕ್ರಿಯಾ ಸಮಿತಿ ಒತ್ತಾಯ

Update: 2016-11-12 19:46 IST

ಕಾಸರಗೋಡು,ನ.12 : ಕಾಸರಗೋಡು   ಜಿಲ್ಲಾ ನ್ಯಾಯಾಧೀಶ  ವಿ. ಕೆ  ಉಣ್ಣಿ ಕೃಷ್ಣನ್ ರವರ ಸಾವಿನ ಹಿಂದಿರುವ  ನಿಗೂಢತೆ ಬಯಲಿಗೆ ತರಲು ನ್ಯಾಯಾಂಗ ತನಿಖೆ ನಡೆಸುವಂತೆ  ಕ್ರಿಯಾ ಸಮಿತಿ ಒತ್ತಾಯಿಸಿದೆ.

ಇದೊಂದು ಕೊಲೆ ಎಂಬ ಸಂಶಯ ಉಂಟಾಗಿದೆ. ಮೆಜಿಸ್ಟ್ರೇಟ್ ರವರ ಮೇಲೆ ಸುಳ್ಯ ಪೊಲೀಸರು ಚಿತ್ರ ಹಿಂಸೆ ನೀಡಿದ್ದಾರೆ.  ಇವರ ಜೊತೆ ತೆರಳಿದ್ದ  ಉಳಿದ ನ್ಯಾಯವಾದಿಗಳ ಬಗ್ಗೆಯೂ ಸಂಶಯ ತಲೆದೋರಿದೆ.ಉನ್ನಿಕೃಷ್ಣನ್ ರವರ ಮೊಬೈಲನ್ನು  ಸುಳ್ಯ ಪೊಲೀಸರು ಕಸಿದುಕೊಂಡು ಅವರ ಬಳಿಯೇ ಇಟ್ಟಿದ್ದಾರೆ.  ಮೆಜಿಸ್ಟ್ರೇಟ್ ರನ್ನು ಸುಳ್ಯಕ್ಕೆ ಕರೆದೊಯ್ದ  ನ್ಯಾಯವಾದಿಗಳ ಪಾತ್ರದ ಕುರಿ ತು  ಸಮಗ್ರ ತನಿಖೆ ನಡೆಸಬೇಕು. ಮೆಜಿಸ್ಟ್ರೇಟ್ ರವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸಂಶಯ ತಲೆದೋರುತ್ತಿದ್ದು, ಇದರಿಂದ   ಸಮಗ್ರ ತನಿಖೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.

16 ರಷ್ಟು ದಲಿತ ಸಂಘಟನೆಗಳು ರಚಿಸಿದ  ಜನಾಧಿಪತ್ಯ ಕ್ರಿಯಾ ಸಮಿತಿ  ಯನ್ನು ರಚಿಸಿದ್ದು , ಈ ಕುರಿತು ಹೋರಾಟ ನಡೆಸಲು ಮುಂದಾಗಿದೆ.ಮೆಜಿಸ್ಟ್ರೇಟ್ ರವರ   ಮೊಬೈಲ್ ನ್ನು ಪೊಲೀಸರು  ವಶದಲ್ಲಿರುವ ಕಾರಣ ಏನೆಂಬುದು ಸ್ಪಷ್ಟವಾಗುತ್ತಿಲ್ಲ. ತ್ರಿಶ್ಯೂರಿ ನಲ್ಲಿರುವ  ಊರಿಗೆ ತೆರಳ ಬೇಕಿದ್ದ  ಉನ್ನಿಕೃಷ್ಣನ್ ರವರು  ಸುಳ್ಯಕ್ಕೆ ತಲಪಿದ್ದು ಹೇಗೆ, ಇದರ ಹಿಂದೆ ಕೈವಾಡ ಇದೆ ಎಂಬ ಸಂಶಯ ಕೇಳಿಬರುತ್ತಿದೆ.

ಸುಳ್ಯ ಠಾಣೆ ಯಲ್ಲಿ   ಉನ್ನಿಕೃಷ್ಣನ್ ರವರ ಮೇಲೆ ದೌರ್ಜನ್ಯ ನಡೆದಿದೆ. ಇದರಿಂದ ನಡೆದಾಡಲು ಅವರಿಗೆ ಸಾಧ್ಯವಾಗಿರಲಿಲ್ಲ . ಸಾವಿನ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ .

ಮೆಜಿಸ್ಟ್ರೇಟ್ ರವರ ಮೇಲೆ ದೌರ್ಜನ್ಯ  ನಡೆಸಿದ ಸುಳ್ಯ ಠಾಣಾ ಪೊಲೀಸರನ್ನು ಕೂಡಲೇ ಅಮಾನತುಗೊಳಿಸಬೇಕು. ಉನ್ನಿಕೃಷ್ಣನ್   ಮೂರು ತಿಂಗಳ  ಹಿಂದೆಯಷ್ಟೇ  ಕಾಸರಗೋಡು ನ್ಯಾಯಾಲಯದ ಮೆಜಿಸ್ಟ್ರೇಟ್ ಆಗಿ ಅಧಿಕಾರ ವಹಿಸಿಕೊಂಡಿದ್ದು , ಹಲವು ಬದಲಾವಣೆಗಳನ್ನು ತಂದಿದ್ದರು. ಇದರ ಬಗ್ಗೆ ಕೆಲವರಲ್ಲಿ  ಅತೃಪ್ತಿ ಇತ್ತು. ಇದರಿಂದ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರುವಂತೆ  ಕ್ರಿಯಾ ಸಮಿತಿ ಒತ್ತಾಯಿಸಿದೆ.

ಮದ್ಯ ಸೇವನೆ ನಮ್ಮ ನಾಡಿನಲ್ಲಿ  ತಪ್ಪಲ್ಲ.  ಉನ್ನಿಕೃಷ್ಣನ್ ಮಾತ್ರವಲ್ಲ  ಸುಳ್ಯಕ್ಕೆ ತಲಪಿದವರಲ್ಲಿ ಮೆಜಿಸ್ಟ್ರೇಟ್  ಉನ್ನಿಕೃಷ್ಣನ್  ಮಾತ್ರವೇ ಮದ್ಯ ಸೇವನೆ ಮಾಡಿದ್ದು , ಆಟೋ ಚಾಲಕನ ಜೊತೆ ಮಾತಿನ ಚಕಮಕಿ ನಡೆದಾಗ ಜೊತೆಗಿದ್ದವರು ಮಧ್ಯಪ್ರವೇಶಿಸಿ ಯಾಕೆ  ಇತ್ಯರ್ಥಪಡಿಸಿಲ್ಲ.

ಸಾವಿಗೆ ಸಂಬಂಧಪಟ್ಟಂತೆ  ಹತ್ತರಷ್ಟು ಬೇಡಿಕೆ ಗಳನ್ನೂ  ಕ್ರಿಯಾ ಸಮಿತಿ ಮುಂದಿಟ್ಟಿದೆ.ಸಾವಿನ ಬಳಿಕವೂ ಮೆಜಿಸ್ಟ್ರೇಟ್ ರವರಿಗೆ ನೀಡುವ ಯಾವುದೇ   ಗೌರವ ನೀಡಿಲ್ಲ.  ದಲಿತರಾದುದರಿಂದ  ಗೌರವ ಲಭಿಸಲಿಲ್ಲವೇ ಎಂಬ ಪ್ರಶ್ನೆ ಕ್ರಿಯಾ ಸಮಿತಿಯದ್ದು,  ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರ ತರುವಂತೆ ಕ್ರಿಯಾ ಸಮಿತಿ ಒತ್ತಾಯಿಸಿದೆ  

ಸುದ್ದಿಗೋಷ್ಠಿಯಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ಅರವಿಂದನ್ ಮಾಣಿಕ್ಕೋತ್ , ಒ. ಕೆ ಪ್ರಭಾಕರನ್ ,   ಎಸ್. ಬಿಂದು ಮೋಳ್,  ಸಂಜೀವ ಪುಳ್ಕೂರು,  ಅಜಕ್ಕೋಡ್ ವಸಂತ , ಕೆ . ದಿವ್ಯ, ಕರುಣಾಕರ , ಸಿ . ಎಚ್  ಗೋಪಾಲ ,ಕೆ . ಕೆ  ಸ್ವಾಮಿ ಕೃಷ್ಣ , ಪ್ರಕಾಶ್ ಪನಯಾಲ್ ಮೊದಲಾದವರು ಉಪಸ್ಥಿತರಿದ್ದರು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News