ಅನಂತಾಡಿ-ಗೋಳಿಕಟ್ಟೆಯ ಫ್ರೆಂಡ್ಸ್ ಬಳಗ ಮತ್ತು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಆಶ್ರಯದಲ್ಲಿ ರಕ್ತದಾನ ಶಿಬಿರ
Update: 2016-11-12 20:00 IST
ವಿಟ್ಲ,ನ.12 : ಅನಂತಾಡಿ-ಗೋಳಿಕಟ್ಟೆಯ ಫ್ರೆಂಡ್ಸ್ ಬಳಗ ಮತ್ತು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಇವುಗಳ ಆಶ್ರಯದಲ್ಲಿ ಅನಂತಾಡಿ ಗ್ರಾಮ ವ್ಯಾಪ್ತಿಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮವು ಗೋಳಿಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರುಗಳಾದ ಡಾ. ರೂಹಿ ಖಾನ್, ಡಾ. ವಿದ್ಯಾ, ಫ್ರೆಂಡ್ಸ್ ಬಳಗದ ಗೌರವಾಧ್ಯಕ್ಷ ಅರವಿಂದ ಕೊಂಡೆ, ಅಧ್ಯಕ್ಷ ರಝಾಕ್ ಗುಲ್ಝಾರ್, ಕಾರ್ಯದರ್ಶಿ ಕಿರಣ್ ಪೂಜಾರಿ, ಸಾಮಾಜಿ ಕಾರ್ಯಕರ್ತ ಸುರೇಶ್ ಬಂಟ್ರಿಂಜ ಮೊದಲಾದವರು ಉಪಸ್ಥಿತರಿದ್ದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.