ಮುಲ್ಕಿ : ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆ
ಮುಲ್ಕಿ, ನ.12: ಮುಲ್ಕಿ ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ಬಜಪೆ ವಲಯ ಕಾಂಗ್ರೆಸ್ ಸಮಿತಿಗಳ ಶ್ರಯದಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ ಹಾಗೂ ಕಾಂಗ್ರೆಸ್ ನಡಿಗೆ-ಗ್ರಾಮ ಸುರಾಜ್ಯದ ಕಡೆಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವು ನ.14ರಂದು ಸೋಮವಾರ ಕಿನ್ನಿಗೋಳಿಯ ರಾಂಜಾಂಗಣ ಸಭಾಭವನದಲ್ಲಿ ನಡೆಯಲಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರ ಶಾಸಕ ಅಭಯಚಂದ್ರ ಜೈನ್ ತಿಳಿಸಿದರು.
ಇಂದು ಮುಲ್ಕಿಯ ಆದಿಧನ್ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಭಾಗವಾಗಿ ಆರ್ಥಿಕವಾಗಿ ಬಡವರು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಇದ್ದು ವಿದ್ಯಾಭ್ಯಾಸ ಮುಂದುವರಿಸಲಾಗದ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ. ನೀಡ ವಿದ್ಯಾಭ್ಯಾಆಸ ಮುಂದುವರಿಸಲು ಉತ್ತೇಜನ ನೀಡಲಾಗುತ್ತಿದೆ .
ಈ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು 20 ರಿಂದ 25 ಸಾವಿರ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ಹಾಗೂ ಹೈನುಗಾರಿಕೆಗೆ ಒತ್ತು ನೀಡುವ ಉದ್ದೇಶದಿಂದ ಪ್ರತ್ಸಾಹ ನೀಡಲಾಗುತ್ತಿದೆ ಎಂದು ಜೈನ್ ನುಡಿದರು.
ಅಂದು ಬೆಳಗ್ಗೆ 9ರಿಂದ 10ರ ವರೆಗೆ ಪ್ರತಿನಿಧಿಗಳ ನೋಂದಣಿ ಮತ್ತು ಉಘು ಉಪಹಾರ ಇದ್ದು, 10ರಿಂದ 11 ಗಂಟೆಯ ವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಕಾಂಗ್ರೆಸ್ ಪಕ್ಷದ ಆಡಳಿದ ಇತಿಹಾಸದ ತಳುಕು, ಸಿದ್ದರಾಮಯ್ಯ ನೇತೃತ್ವದ ನುಡಿದಂತೆ ನಡೆದ ಸರಕಾರದ ಆಡಳಿ ವೈಶಿಷ್ಟ್ಯ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 13.30ರ ಭೋಜನ ಕೂಟ ನಡೆದು ಬಳಿಕ ಕೇಂದ್ರ ಸರಕಾರದ ವೈಫಲ್ಯದಿಂದಾಗಿ ಮೋಸಹೋದ ಜನತೆ, ದೇಶದಲ್ಲಿ ಕೋಮುಸೌಹಾರ್ಧತೆ ಕಾಪಾಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ, ಪಕ್ಷ ಸಂಘಟನೆ ಮತ್ತು ಗೆಲುವಿನತ್ತ ಕಾಂಗ್ರೆಸ್ ಗುರಿ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು, 4.30 ರಿಂದ ಸಂವಾದ ಹಾಗೂ ಸಮಾರೋಪಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್, ಪುತ್ತೂರು ವಿಧಾನ ಸಭಾ ಕ್ಷೇತ್ರಶಾಸಕಿ ಹಾಗೂ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೇಟ್ಟಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ವಸಂತ ಬಂಗೇರಾ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮಂಗಳೂರು ಉತ್ತರ ವಲಯ ಕ್ಷೇತ್ರ ಶಾಸಕ ಮೊಯ್ದಿನ್ ಬಾವ, ರಾಜ್ಯ ಯವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಿಸ್ವಾನ್ ಅರ್ಶದ್, ದ.ಕ. ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕಗಷ ಮಿಥುನ್ ರೈ, ಬೆಳ್ತಂಗಡಿ ಜಿಲ್ಲಾ ಪಂಚಾಯತ್ ಸದಸ್ಯ ಸಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿರುವವರು ಎಂದು ಶಾಸಕರು ಮಾಹಿತಿ ನೀಡಿದರು.
ಎಪಿಎಂಸಿ ಚುನಾವಣೆಯ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಶಾಸಕರು, ಎಪಿಎಂಸಿ ಚುನಾವಣೆ ಹತ್ತಿರದಲ್ಲಿದ್ದು, ಮುಲ್ಕಿಯ ಕಳೆದ ಬಾರಿ ಇದ್ದ ಒಂದು ಸ್ಥಾನ ಈ ಬಾರಿ ಎರಡು ಸ್ಥಾನಗಳಿಗೆ ಸೀಮಿತಗೊಂಡಿದೆ. ಅದರಂತೆ, ಸಾಮನ್ಯ ವರ್ಗದಿಂದ ಪ್ರಮೋದ್ ಕುಮಾರ್ ಕಿನ್ನಿಗೋಳಿ ಮತ್ತು ಹಿಂದುಳಿದ ವರ್ಗದ ಮೀಸಲಾತಿಗೆ ಜಾಯ್ ಡಿಸೋಜಾ ಸ್ಪಧೇಯಲ್ಲಿರಲಿದ್ದಾರೆ. ಬಜಪೆ ಎಪಿಎಂಸಿ ವಿಭಾಗದಿಂದ ಮೋನಪ್ಪ ಶೆಟ್ಟ ಎಕ್ಕಾರು ಸ್ಪರ್ಧೆಯಲ್ಲಿರುತ್ತಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಬಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮೂಡಬಿದಿರೆ ಯುವ ಕಂಗ್ರೆಸ್ ಅಧ್ಯಕ್ಷ ಚಂದ್ರಹಸ ಸನಿಲ್, ಯುವ ಕಾಂಗ್ರೆಸ್ ಮುಲ್ಕಿ ಬ್ಲಾಕ್ ಅಧ್ಯಕ್ಞ ಹಕೀಂ, ದ.ಕ. ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಲ್ಕಿ ಪಂಚಾಐತ್ ಮಾಜೀ ಅಧ್ಯಕ್ಷ ಆಸೀಫ್ ಬಿ.ಎಂ., ನಗರ ಪಂಚಾಯತ್ ಸದಸ್ಯ ಪುತ್ತುಬಾವಾ, ಬಶೀರ್ ಕುಳಾಯಿ,ಮತ್ತಿತರರು ಉಪಸ್ಥಿತರಿದ್ದರು.