×
Ad

ಮಂಜನಾಡಿ ಬಳಿ ಇಬ್ಬರಿಗೆ ಚೂರಿ ಇರಿತ : ವಿದ್ಯಾರ್ಥಿಗೆ ಗಂಭೀರ ಗಾಯ

Update: 2016-11-12 22:36 IST

ಮಂಗಳೂರು, ನ. 12: ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕಮಿಗಳು ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಾಡಿಯ ಕಟ್ಟೆಮಾರು ಹಾಗೂ ಅನ್ಸಾರ್ ನಗರದ ಬಳಿ ನಡೆದಿದೆ. ಇರಿತದಿಂದ ಒಬ್ಬಾತ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳನ್ನು ಮಂಜನಾಡಿ ಬಳಿಯ ನಿವಾಸಿ ಮಹಮ್ಮದ್ ಅವರ ಪುತ್ರ ನವಾಝ್(25) ಹಾಗೂ ್ದ ಅನ್ಸಾರ್ ನಗರದ ರಝಾಕ್ ಎಂಬವರ ಪುತ್ರ ಕಾಲೇಜು ವಿದ್ಯಾರ್ಥಿ ಶಮೀರ್(19) ಎಂದು ಗುರುತಿಸಲಾಗಿದೆ.

 ನವಾಝ್‌ಮಂಜನಾಡಿಯ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದಿದ್ದಾರೆ. ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ರಸ್ತೆಗೆ ಕುಸಿದು ಬಿದ್ದ ನವಾಝ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನವಾಝ್ ಹಾಸನದ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದು ರಜೆಯ ಮೇಲೆ ಇತ್ತೀಚೆಗಷ್ಟೇ ಮಂಜನಾಡಿಯ ತನ್ನ ಮನೆಗೆ ಮರಳಿದ್ದರೆಂದು ಹೇಳಲಾಗಿದೆ.

 ದುಷ್ಕರ್ಮಿಗಳ ದುಷ್ಕೃತ್ಯ ಇಲ್ಲಿಗೇ ನಿಲ್ಲದೇ, ಸುಮಾರು 1ಕಿ.ಮೀ. ದೂರದ ತೌಡುಗೋಳಿ ಕ್ರಾಸ್ ಸಮೀಪದ ಅನ್ಸಾರ್ ನಗರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿ ಶಮೀರ್‌ನ ಹೊಟ್ಟೆಯ ಭಾಗಕ್ಕೂ ಇರಿದು ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡಿರುವ ಶಮೀರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಕಮಿಷನರ್, ಕೊಣಾಜೆ ಠಾಣಾ ಇನ್ ಸ್ಪೆಕ್ಟರ್ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News