ಮೊದಲು ತೆಗಳಿ, ಬಳಿಕ ಹೊಗಳಿದ ಟ್ರಂಪ್!
Update: 2016-11-13 00:15 IST
ವಾಶಿಂಗ್ಟನ್, ನ. 12: ತನ್ನ ಆಯ್ಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅಮೆರಿಕನ್ನರನ್ನು ದೇಶದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಖಂಡಿಸಿದ್ದಾರೆ. ಆದರೆ, ಅದಾದ ಗಂಟೆಗಳ ಬಳಿಕ ಅವರನ್ನು ಶ್ಲಾಘಿಸಿದ್ದಾರೆ.
ಇದು ಟ್ರಂಪ್‌ರ ನಾಯಕತ್ವ ಶೈಲಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
‘‘ಕಳೆದ ರಾತ್ರಿ ಪ್ರತಿಭಟನಾಕಾರರ ಸಣ್ಣ ಗುಂಪುಗಳು ಪ್ರತಿಭಟನೆ ನಡೆಸಿದವು. ನಮ್ಮ ಭವ್ಯ ದೇಶದ ಬಗ್ಗೆ ಅವರು ಹೊಂದಿರುವ ಮೋಹವನ್ನು ನಾನು ಮೆಚ್ಚುತ್ತೇನೆ. ನಾವೆಲ್ಲರೂ ಜೊತೆಯಾಗುವ ಮತ್ತು ದೇಶದ ಬಗ್ಗೆ ಹೆಮ್ಮೆ ಪಡೋಣ’’ ಎಂದು ಟ್ರಂಪ್ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದರು.ಇದು ಅವರು ಈ ಮೊದಲು ಮಾಡಿದ ಟ್ವೀಟ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ತನ್ನ ಮೊದಲಿನ ಟ್ವೀಟ್‌ನಲ್ಲಿ ಟ್ರಂಪ್ ಎಂಟು ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ‘‘ವೃತಿಪರ ಪ್ರತಿಭಟನಾಕಾರರು, ಅವರು ಮಾಧ್ಯಮಗಳಿಂದ ಪ್ರಚೋದಿತರಾಗಿದ್ದಾರೆ’’ ಎಂದಿದ್ದರು.