ಅಮೆರಿಕ: ಈ ಬಾರಿಯ ಮತದಾನ 20 ವರ್ಷಗಳಲ್ಲೇ ಕಡಿಮೆ
Update: 2016-11-13 00:16 IST
ವಾಶಿಂಗ್ಟನ್, ನ. 12: ಈ ಬಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಪ್ರಮಾಣ 20 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಮಂಗಳವಾರ ನಡೆದ ಮತದಾನದಲ್ಲಿ ಚಲಾವಣೆಯಾದ ಮತಪತ್ರಗಳನ್ನು ವಿಂಗಡಿಸುವ ಕಾರ್ಯದಲ್ಲಿ ಚುನಾವಣಾ ಅಧಿಕಾರಿಗಳು ಈಗಲೂ ನಿರತರಾಗಿದ್ದಾರೆ. ಈಗಾಗಲೇ 12.6 ಕೋಟಿ ಮತಗಳನ್ನು ಲೆಕ್ಕಮಾಡಲಾಗಿದ್ದು, ಸುಮಾರು 55 ಶೇಕಡ ಮತದಾರರು ಈ ಬಾರಿ ಮತ ಚಲಾಯಿಸಿದ್ದಾರೆ ಎಂದು ಸಿಎನ್‌ಎನ್ ಹೇಳಿದೆ.
ಇದು 1996ರ ಬಳಿಕ ಚಲಾವಣೆಯಾದ ಅತಿ ಕಡಿಮೆ ಪ್ರಮಾಣದ ಮತಗಳಾಗಿವೆ. 1996ರಲ್ಲಿ 53.5 ಶೇಕಡ ಮತದಾನವಾಗಿತ್ತು.
2008ರಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ, ಅಂದರೆ ಸುಮಾರು 64 ಶೇಕಡ ಮತದಾನವಾಗಿತ್ತು.