×
Ad

ಓಲ್ಡ್ ಕೆಂಟ್ ಕಾಂಕ್ರಿಟ್ ರಸ್ತೆ ಉದ್ಘಾಟನೆ

Update: 2016-11-13 00:17 IST

ಮಂಗಳೂರು, ನ.12: ನಗರದ ಪಾಂಡೇಶ್ವರದ ಓಲ್ಡ್ ಕೆಂಟ್ ಕಾಂಕ್ರಿಟ್ ರಸ್ತೆಯನ್ನು ಎಂ.ವಿ. ಶೆಟ್ಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಾಮ್‌ಗೋಪಾಲ್ ಶೆಟ್ಟಿ ಶನಿವಾರ ಉದ್ಘಾಟಿಸಿದರು. ಶಾಸಕ ಜೆ.ಆರ್. ಲೋಬೊ ಮಾತನಾಡಿ, ನಗರದ ಹೃದಯಭಾಗಕ್ಕೆ ಹತ್ತಿರದ ಈ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿತ್ತು. ಇದೀಗ 50ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

   

ಮೇಯರ್ ಹರಿನಾಥ್, ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಅಪ್ಪಿ, ಕಾರ್ಪೊರೇಟರ್‌ಗಳಾದ ದಿವಾಕರ್, ಅಬ್ದುಲ್ಲತೀಫ್, ಎ.ಸಿ. ವಿನಯರಾಜ್, ಪ್ರಕಾಶ್ ಅಳಪೆ, ಪ್ರೇಮ್‌ನಾಥ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಗುತ್ತಿಗೆದಾರ ರಾಮ್ ಕಾಮತ್, ಪಾಲಿಕೆಯ ಇಂಜಿನಿಯರ್ ಗಣಪತಿ, ಸುಧಾಕರ ಶೆಟ್ಟಿ, ಜಯಕರ ಸಮರ್ಥ, ಹರೀಶ್, ಸಂಜೀವ ಕೋಟ್ಯಾನ್, ದಿನೇಶ್ ಪಿ.ಎಸ್. ಸುಜಾತಾ ಅಹಲ್ಯಾ, ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News