×
Ad

ಮಂಗಳೂರು; ಅಕ್ಷರ ಪತ್ರಿಕೆಯ ಸಂಪಾದಕ ಮಂಡಳಿ ರಚನೆ

Update: 2016-11-13 10:00 IST

ಮಂಗಳೂರು, ನ.13: ಸಾಮಾಜಿಕ ತಾಣದಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಅಕ್ಷರ ಇ-ಮ್ಯಾಗಝಿನ್ ನ ನೂತನ ಸಂಪಾದಕ ಮಂಡಳಿ ರಚನೆ ಹಾಗೂ ಸಮಾಲೋಚನಾ ಸಭೆ ಪತ್ರಿಕೆಯ ಕಚೇರಿಯಲ್ಲಿ ನಡೆಯಿತು.

ಪತ್ರಿಕೆಯ ಸಂಪಾದಕ ಬಿ.ಎಸ್.ಮುಹಮ್ಮದ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿ ವಿಷಯ ಮಂಡಿಸಿದರು. ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಸಭೆ ಉದ್ಘಾಟಿಸಿದರು. ಪತ್ರಿಕೆಯ ನೂತನ ಸಂಪಾದಕರಾಗಿ ಬಿ.ಎಸ್. ಮುಹಮ್ಮದ್ ಇಸ್ಮಾಯಿಲ್, ಉಪ ಸಂಪಾದಕರಾಗಿ ಎಂ.ಎಂ. ಮಹ್ರೂಫ್ ಆತೂರು, ನಿರ್ವಾಹಕರಾಗಿ ಆಶಿಕ್ ಕುಕ್ಕಾಜೆ ರವರನ್ನುಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಕ್ಷರ ಸಾಹಿತ್ಯ ಬಳಗದ ಲುಕ್ಮಾನ್ ಅಡ್ಯಾರ್, ಬಾಪು ಅಮ್ಮೆಂಬಳ, ನಿಝಾಮ್ ಮಂಚಿ, ನಾಸಿರ್ ಸಜಿಪ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News