×
Ad

"ಮದುವೆಗೆ 5ಲಕ್ಷ ಬ್ಯಾಂಕಿನಿಂದ ತೆಗೆಯಬಹುದು" ಎಂಬ ವೈರಲ್ ಸಂದೇಶ ಇದರ ವಾಸ್ತವವೇನು?

Update: 2016-11-13 15:06 IST

ಮಂಗಳೂರು, ನ.13; 500 ಹಾಗೂ 1000ರೂ, ನೋಟುಗಳನ್ನು ಹಠಾತ್ತನೇ ರದ್ದು ಮಾಡಿದ ಬಳಿಕ ದೈನಂದಿನ ವ್ಯವಹಾರಗಳಿಗೆ ಕರೆನ್ಸಿ ಕೊರತೆ ಎದುರಿಸಿ ಜನರು ಸಂಕಟಕ್ಕೀಡಾಗಿರುವ ನಡುವೆಯೇ ಕೆಲವು ವಿಕೃತರು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಬೆಳಕಿಗೆ ಬಂದಿದೆ.

ಸದ್ಯ ಇರುವ 500, 1000ರೂ. ನೋಟುಗಳನ್ನು ಬ್ಯಾಂಕಿಗೆ ಹಾಕಲು ಮಿತಿ ಇಲ್ಲದಿದ್ದರೂ ಬ್ಯಾಂಕಿನಿಂದ ಹಣ ಪಡೆಯುವುದರ ಮೇಲೆ ಮಿತಿ ಇದೆ. ಒಮ್ಮೆಗೆ ಗರಿಷ್ಠ 4,000 ರೂ, ವಾರಕ್ಕೆ ಗರಿಷ್ಠ 20,000 ರೂ.ನಗದು  ಪಡೆಯಲು ಅವಕಾಶವಿದೆ. 

ಹೀಗಿರುವಾಗ ಈ ಕೆಳಗಿನ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿ ಜನರಲ್ಲಿ ತೀವ್ರ ಗೊಂದಲ, ಸಂಶಯ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ನಿಮ್ಮ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಅನುಮತಿ ಪತ್ರ ಪಡೆದು ನಿಮ್ಮ ಬ್ಯಾಂಕ್ ಖಾತೆಯಿಂದ ಒಮ್ಮೆಲೇ 5 ಲಕ್ಷ ರೂಪಾಯಿವರೆಗೆ ಹಣ ತೆಗೆಯಬೇಕು ಎಂದು ಈ ಸಂದೇಶದಲ್ಲಿ ಹೇಳಲಾಗಿದೆ. ಸಾಲದಕ್ಕೆ ಯಾವುದೇ ಸಂಶಯವಿದ್ದರೆ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಎಂದು ಮೂರು ಮೊಬೈಲ್ ನಂಬರ್ ಗಳನ್ನು ಕೂಡಾ ನೀಡಲಾಗಿದೆ. ಈ ಮೂರು ನಂಬರ್ ಗಳಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿಲ್ಲ.

ವೈರಲ್ ಆದ ಸಂದೇಶ ಈ ಕೆಳಗೆ ನೀಡಲಾಗಿದೆ.

"If there is a marriage in any family. They can approach SP. Obtain a letter from his office and go to bank to withdraw UpTo 5 lakh. Please spread this in other groups also. Any doubt contact 9440313183. Helplines. 9936379217. 9454416400.''

ಈ ಬಗ್ಗೆ varthabharati.in ಪರಿಶೀಲಿಸಿದಾಗ ಇದು ಕೇವಲ ಸುಳ್ಳು ಸುದ್ದಿ ತಿಳಿದು ಬಂದಿದೆ.

"ಈ ಬಗ್ಗೆ ನನಗೆ ಯಾವುದೇ ಆದೇಶ ಬಂದಿಲ್ಲ" ಎಂದು ದ.ಕ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆಯವರು 'ಡಿ.ಕೆ ಪೊಲೀಸ್' ವಾಟ್ಸ್ಆಪ್ ಗ್ರೂಪ್ ನಲ್ಲಿ ಪ್ರತಿಕ್ರಿಯಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News