×
Ad

‘ಸುರಕ್ಷಾ’ ಹೋಮ್ ಡೆಕೋರ್ ಉದ್ಘಾಟನೆ

Update: 2016-11-13 17:13 IST

ಮಂಗಳೂರು, ನ.13: ನಗರದ ಹಳೆ ಕಂಕನಾಡಿ ರಸ್ತೆಯ ಮಾಸ್ಕೋ ಮೆರಿಡಿಯನ್ ಕಟ್ಟಡದಲ್ಲಿ ‘ಸುರಕ್ಷಾ’ ಹೋಮ್ ಡೆಕೋರ್‌ನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ರವಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಮನೆಯ ಅಂದವನ್ನು ಹೆಚ್ಚಿಸುವ ಸಾಮಗ್ರಿಗಳು ಒಂದೇ ಕಡೆ ಸಿಗುವಂತೆ ಮಾಡುವಲ್ಲಿ ಸಂಸ್ಥೆಯ ಪಾಲುದಾರರ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಒಡಿಯೂರು ಗುರುದೇವ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಶೋರೂಂ ಆಶೀರ್ವಚನ ನೀಡಿದರು. ಸಂಸ್ಥೆಯ ಪಾಲುದಾರರಾದ ರಮೇಶ್ ಕೆ. ಮತ್ತು ಕಿಶೋರ್ ಆರ್. ಭಂಡಾರಿ, ಕಟ್ಟಡದ ಮಾಲಕ ಅಬ್ದುರ್ರಶೀದ್, ಚಿತ್ರನಟಿ ಅನ್ವಿತಾ ಸಾಗರ್ ಉಪಸ್ಥಿತರಿದ್ದರು.

ಒನ್‌ವೇ ಸೊಲ್ಯುಶನ್ಸ್‌ನ ಅಂಗಸಂಸ್ಥೆಯಾಗಿರುವ ಈ ಮಳಿಗೆಯಲ್ಲಿ ಸುಂದರ ವಿನ್ಯಾಸದ ಕಲಾಕೃತಿಗಳ ಜೊತೆಗೆ ಗೋಡೆ, ನೆಲ ಮತ್ತು ಮನೆಯ ಪ್ರತಿಯೊಂದು ಭಾಗವನ್ನೂ ಅಲಂಕರಿಸುವ ಸಾಧನಗಳನ್ನು ಮಾರಾಟ ಮಾರಾಟ ಮಾಡಲಾಗುತ್ತದೆ. 200 ರೂ.ನಿಂದ 2 ಲಕ್ಷ ರೂ.ವರೆಗಿನ ಸಾಮಗ್ರಿಗಳು ಇಲ್ಲಿ ಲಭ್ಯವಿದೆ. ಮುಸ್ಲಿಮರ ಯಾಸೀನ್ ಫ್ರೇಮ್‌ಗಳು, ಆಝಾನ್ ಫ್ರೇಮ್‌ಗಳು, ವಿವಿಧ ವಿನ್ಯಾಸದ ವಾಚ್‌ಗಳು, ಅತ್ಯಾಕರ್ಷಕ ಶೈಲಿನ ಪೈಂಟಿಂಗ್‌ಗಳು, ವಿನೂತನ ವಿನ್ಯಾಸದ ಕಪ್, ಸಾಸರ್‌ಗಳು, ಟ್ರೇ, ಟೀಪಾಯ್‌ಗಳು, ಗ್ರಾಂಡ್ ಮದರ್-ಫಾದರ್ ಗಡಿಯಾರಗಳು, ಕಲಾತ್ಮಕ ಫೌಂಟೇನ್‌ಗಳು, ವಿವಿಧ ಮತ-ಧರ್ಮದ ದೇವರ ಕಲಾಕೃತಿಗಳು, ಶೋಕೇಸ್ ಸಾಮಗ್ರಿಗಳು ಇಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News