×
Ad

‘ಹವೇಲಿ ಮಲ್ಟಿ ಕ್ಯುಸಿನ್ಸ್ ರೆಸ್ಟೋರಂಟ್’ ಉದ್ಘಾಟನೆ

Update: 2016-11-13 17:28 IST

ಮಂಗಳೂರು,ನ.13: ಸೌದಿ ಅರೇಬಿಯದಲ್ಲಿ ನೆಲೆಸಿರುವ ಮಂಗಳೂರು ಮೂಲದ ಶೇಖ್ಸ್ ಸಹೋದರರ ಮಾಲಕತ್ವದಲ್ಲಿ ‘ಹವೇಲಿ ಮಲ್ಟಿ ಕ್ಯುಸಿನ್ಸ್ ರೆಸ್ಟೋರಂಟ್’ನ್ನು ಕದ್ರಿ ರಸ್ತೆಯ ಬಳಿಯ ಯೆನೆಪೊಯ ಮಾಲ್‌ನಲ್ಲಿ ಸಚಿವ ಯು.ಟಿ.ಖಾದರ್ ರವಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಹವೇಲಿಯಲ್ಲಿ ಆರೋಗ್ಯಕ್ಕೆ ಪೂರಕವಾದ, ಉತ್ತಮ ಗುಣಮಟ್ಟದ ಆಹಾರ ಲಭಿಸಲಿ. ಪ್ರವಾಸಿಗರನ್ನು ಆಕರ್ಷಿಸಲಿ. ಮಂಗಳೂರಿನ ಅಭಿವೃದ್ಧಿಯ ಭಾಗವಾಗಿ ಬೆಳೆಯಲಿ ಎಂದು ಆಶಿಸಿದರು.

ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗಣಪತಿ ಭಟ್, ಸದಾನಂದ ನಾಯಕ್, ಸಿ.ಎಸ್.ಚೇತನ್ ನಾಯಕ್, ಡಾ.ಶಿವರಾಮ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ವಜೀರ್ ಬಾಷಾ, ಪಾಲುದಾರರಾದ ಶಬ್ಭೀರ್ ಶೇಖ್, ಜಹೀರ್ ಶೇಖ್, ನಾಸಿರ್ ಅಹ್ಮದ್ ಶೇಖ್, ಮುನೀರ್ ಅಹ್ಮದ್ ಶೇಖ್, ಮುಹಮ್ಮದ್ ನಝಾರ್ ಮೊಯ್ದಿನ್ ಮತ್ತು ಝಾಹಿದ್ ಹುಸೈನ್, ಅಬ್ದುಲ್ ಖಾದರ್ ಯೂಸುಫ್, ಅಬ್ದುಲ್ ಮಜೀದ್, ಇಕ್ಬಾಲ್, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

ಶೇಖ್ಸ್‌ಗ್ರೂಪ್‌ನ ಸಹೋದರರು ಸೌದಿಅರೇಬಿಯಾದಲ್ಲಿ ಭಾರತೀಯ ವಿವಿಧ ಖಾದ್ಯಗಳಾದ ರೆಸ್ಟೋರಂಟ್ ಸ್ಥಾಪಿಸಿ ಯಶಸ್ವಿಯಾಗಿದ್ದರು. ಆ ಅನುಭವದಿಂದ ಶೇಖ್ಸ್ ಗ್ರೂಪ್‌ನ ಸಮೂಹವು ಮಂಗಳೂರಿನಲ್ಲಿ ಪ್ರಥಮ ರೆಸ್ಟೋರಂಟ್ ಸ್ಥಾಪಿಸಿದೆ.

ಹವೇಲಿ ಮಲ್ಟಿ ಕ್ಯುಸಿನ್‌ನಲ್ಲಿ ಇಂಡಿಯನ್, ಚೈನೀಸ್, ಕಾಂಟಿನೆಂಟಲ್, ತಂದೂರ್ ವಿಶೇಷತೆಗಳನ್ನು ಹೊಂದಿದೆ. ನುರಿತ ಬಾಣಸಿಗರಾದ ಜಸ್ವೀರ್ ಸಿಂಗ್, ಗೋವಿಂದ್ ರಾವತ್, ವಿ.ಪಿ.ಭಟ್ ರೆಸ್ಟೊರಂಟ್‌ನ ಚೆಫ್‌ಗಳಾಗಿದ್ದಾರೆ. ಮಂಗಳೂರಿನ ಜತೆಗೆ ಮಿತದರದಲ್ಲಿ ಸಸ್ಯಹಾರ, ಮಾಂಸಹಾರಗಳಲ್ಲಿ ಗುಣಮಟ್ಟದ ಗರಿಷ್ಠ, ರುಚಿಕರ ಖಾದ್ಯಗಳನ್ನು ಒದಗಿಸುವ ಉದ್ದೇಶವನ್ನು ಶೇಖ್ಸ್ ಸಹೋದರರು ಹೊಂದಿದ್ದಾರೆ.

 ರೆಸ್ಟೋರೆಂಟ್‌ನಲ್ಲಿ ಕುಟುಂಬದ ಸದಸ್ಯರು ಬಂದು ಪ್ರತ್ಯೇಕವಾಗಿ ಉಪಹಾರ ಸೇವಿಸಲು ವಿಶೇಷ ಡೈನಿಂಗ್ ಏರಿಯಾ ಜೊತೆಗೆ ಪಾರ್ಟಿ ಹಾಲ್, ಫ್ಯಾಮಿಲಿ ಕ್ಯಾಬಿನ್ ವ್ಯವಸ್ಥೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News