ಮುಡಿಪು: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 7ನೆ ಶಾಖೆ ಉದ್ಘಾಟನೆ

Update: 2016-11-13 12:56 GMT

ಕೊಣಾಜೆ, ನ.13: ಮುಡಿಪುವಿನಲ್ಲಿ ಶುಭಾರಂಭಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 7ನೆ ನೂತನ ಶಾಖೆಯನ್ನು ಶಾಸಕ ಕೆ.ವಸಂತ ಬಂಗೇರ ರವಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ವಸಂತ ಬಂಗೇರರು, ದ.ಕ.ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳ ಸೇವೆಯ ಪಾತ್ರವು ಮಹತ್ವವಾದುದು. ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘವು ಶೈಕ್ಷಣಿಕ ಕ್ರಾಂತಿಯ ಹೆಜ್ಜೆಯೊಂದಿಗೆ ಆರ್ಥಿಕ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಮುನ್ನಡೆದು ಇದೀಗ 7ನೆ ನೂತನ ಶಾಖೆಯು ಮುಡಿಪುವಿನಲ್ಲಿ ಆರಂಭಗೊಂಡಿದೆ. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಯಶಸ್ಸಿನಲ್ಲಿ ಸಂಘದ ಸಿಬ್ಬಂದಿಯ ಪಾತ್ರ ಮಹತ್ತರವಾದುದು. ಮುಡಿಪು ಶಾಖೆಯು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ಬೆಳ್ತಂಗಡಿಯ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘವು ಬೆಳೆದು ಮುಡಿಪುವಿನಲ್ಲಿ ಯಶಸ್ವಿಯಾಗಿ 7ನೆ ಶಾಖೆ ಉದ್ಘಾಟನೆಗೊಂಡಿರುವುದು ಸಂಘದ ಉತ್ತಮವಾದ ಸೇವೆಯೇ ಕಾರಣವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೋ ಅವರಿಗೆ ಗ್ರಾಮೀಣ ಭಾಗದ ಜನರ, ರೈತರ, ಬಡವರ ಸಮಸ್ಯೆಗಳ ಬಗ್ಗೆ ಅರಿವಿದ್ದು ಅದಕ್ಕೆ ಸದಾ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಂಡಿರುತ್ತಾರೆ. ಕಮರ್ಷಿಯಲ್ ಬ್ಯಾಂಕ್‌ಗಳು ಕೇವಲ ದುಡ್ಡು ಇರುವವರಿಗೆ ದುಡ್ಡು ಕೊಡುತ್ತವೆ. ಆದರೆ ಸಹಕಾರಿ ಬ್ಯಾಂಕ್‌ಗಳು ಬಡವರಿಗೂ ಹಣ ಕೊಟ್ಟು ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದರು.

ಬ್ಯಾಂಕ್‌ನ ಭದ್ರತಾ ಕೋಶವನ್ನು ಉದ್ಘಾಟಿಸಿದ ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಗಣಕಯಂತ್ರದ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಗುರುದೇವ ಸಹಕಾರಿ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕುರ್ನಾಡು ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಸವಿತಾ ಹೇಮಂತ್, ದ.ಕ.ಸಹಕಾರಿ ಸಂಘದ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುಭಾಶ್ ಧರ್ಮನಗರ, ಮೋಹನ ಕುರ್ನಾಡು, ಯುವವಾಹಿನಿ ಅಧ್ಯಕ್ಷ ಅರುಣ್ ಕುಮಾರ್, ಕಟ್ಟಡ ಮಾಲಕ ನಾರಾಯಣ ಭಟ್ ಕೊಡಕ್ಕಲ್ಲು, ಬ್ಯಾಂಕ್ ಉಪಾಧ್ಯಕ್ಷ ದಾಮೋದರ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು. ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News