ಕಡಬ: ಬಿರುಗಾಳಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ರೈ ಭೇಟಿ

Update: 2016-11-13 14:05 GMT

ಕಡಬ, ನ.13: ಇತ್ತೀಚೆಗೆ ಬೀಸಿದ ಭಾರೀ ಬಿರುಗಾಳಿಗೆ ಸುಮಾರು 600 ಎಕರೆಯಷ್ಟು ನಾಶವಾಗಿದ್ದ ಗುಂಡ್ಯ ಸಮೀಪದ ಅನಿಲ ಪ್ರದೇಶಕ್ಕೆ ರಾಜ್ಯ ಅರಣ್ಯ ಹಾಗೂ ಪರಿಸರ ಸಂರಕ್ಷಣಾ ಸಚಿವ ಬಿ. ರಮಾನಾಥ ರೈ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ರಿಂದ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದ ಸಚಿವರು, ಬಿರುಗಾಳಿಯಿಂದಾಗಿ ಅಪಾರ ಅರಣ್ಯ ನಾಶವಾಗಿದ್ದು, ಅದರೊಂದಿಗೆ ಕೆಲವು ಮನೆ ಸೇರಿದಂತೆ ಹಲಮ ಕಡೆ ಕೃಷಿಗೂ ಹಾನಿಯಾಗಿವೆ. ಈ ಸಂಬಂಧ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರಕಾರದಿಂದ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಳಿಕ ಬಿರುಗಾಳಿಯಿಂದಾಗಿ ಹಾನಿಗೀಡಾದ ಜನಾರ್ಧನ ಗೌಡರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ನೀಡಲು ಸೂಚಿಸಲಾಗುವುದು ಎಂದರು.

ಈ ಸಂದರ್ದಲ್ಲಿ ಸಿಂಡಿಕೇಟ್ ಸದಸ್ಯ ಡಾ.ರಘು, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ತಾ.ಪಂ. ಸದಸ್ಯ ಆಶಾ ಲಕ್ಷ್ಮಣ್, ಗಣೇಶ್ ಕೈಕುರೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್, ಬಿಳಿನೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಮನಮೋಹನ್ ಗೋಳ್ಯಾಡಿ, ಕಡಬ ವಲಯದ ಕಿಸಾನ್ ಘಟಕದ ಅಧ್ಯಕ್ಷ ಸೆಬಾಸ್ಟಿನ್, ಸುಬ್ರಹ್ಮಣ್ಯ ವಲಯದ ಅರಣ್ಯಾಧಿಕಾರಿ ಎನ್. ಮಂಜುನಾಥ್, ಪ್ರಮಖರಾದ ಎಂ.ಪಿ. ಯೂಸುಫ್, ರಾಮಕೃಷ್ಣ ಕೊಂಬಾರು, ಇಸ್ಮಾಯೀಲ್, ಝೈನುದ್ದೀನ್ ಸುಂಕದಕಟ್ಟೆ, ಜಿಮ್ಮಿ ಗುಂಡ್ಯ, ಪದ್ಮನಾಭ, ಗುಡ್ಡಪ್ಪ ಗೌಡ ಕೊಂಬಾರು, ಶಶಿಧರ ಬೊಟ್ಟಡ್ಕ, ಗುಣವಂತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News