ಕ್ರೀಡೆಯಿಂದ ಪ್ರೀತಿ, ಸೌಹಾರ್ದತೆ: ಅಭಯಚಂದ್ರ

Update: 2016-11-13 14:22 GMT

ಮೂಡುಬಿದಿರೆ, ನ.13: ಕ್ರೀಡೆಯಿಂದ ಸೌಹಾರ್ದತೆ, ಸಹೋದರ ಭಾವ ಬೆಳೆಯುತ್ತದೆ. ಎಲ್ಲಾ ರಂಗಗಳಲ್ಲಿ ಸೇವೆಗೈಯುತ್ತಿರುವ ರೋಟರಿ ಕ್ಲಬ್ ಸಮಾಜದ ಶಕ್ತಿಯಾಗಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

ಇಲ್ಲಿನ ಮಹಾವೀರ ಕಾಲೇಜು ಜಿ.ವಿ.ಪೈ ಕ್ರೀಡಾಂಗಣದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಆಶ್ರಯದಲ್ಲಿ ರವಿವಾರ ನಡೆದ ರೋಟರಿ ಕ್ಲಬ್‌ನ ವಲಯ 4ರ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಕ್ರೀಡಾ ಮನೋಭಾವನೆಯಿಂದಾಗಿ ಜೀವನದಲ್ಲಿ ಸೋಲು ಎಂಬುದಿಲ್ಲ. ಕ್ರೀಡೆಯಿಂದ ಆರೋಗ್ಯ ವೃದ್ಧಿ, ಮಾನಸಿಕ ಒತ್ತಡ ಕಡಿಮೆಯಾಗಲು ಸಾಧ್ಯ ಎಂದರು.

ರೋಟರಿ ಜಿಲ್ಲಾ ಉಪರಾಜ್ಯಪಾಲ ಸಂತೋಷ ಶೆಟ್ಟಿ, ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್, ರೆನಲ್ ಲೆಫ್ಟಿನೆಂಟ್ ಜಯಕುಮಾರ್ ಶೆಟ್ಟಿ, ಜಿ.ಎಸ್.ಆರ್.ಹರೀಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ವಲಯ ಕ್ರೀಡಾ ಸಂಯೋಜಕ ನಟೇಶ್ ಉಳ್ಳಾಲ ಕ್ರೀಡಾ ಸ್ಪರ್ಧೆಯ ಕುರಿತು ವಿವರ ನೀಡಿದರು. ರೋಟರಿ ಕ್ರೀಡಾ ಸಂಯೋಜಕ ಪ್ರವೀಣ್ ಪಿರೇರಾ ಮಾತನಾಡಿದರು.

ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರೀಶ್ ವಂದಿಸಿದರು. ದೀಪ್ತಿ, ಪ್ರವೀಣ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News