×
Ad

ಬೋಟ್ ಮುಳುಗಡೆ: ಆರು ಮಂದಿ ಮೀನುಗಾರರ ರಕ್ಷಣೆ

Update: 2016-11-13 22:06 IST

ಮಂಗಳೂರು, ನ. 13: ಮಂಗಳೂರು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್‌ವೊಂದು ಮಂಗಳೂರು ಕಡಲ ಕಿನಾರೆಯಿಂದ ಸುಮಾರು ಎಂಟು ನಾಟಿಕಲ್ ಮೈಲ್ ದೂರದಲ್ಲಿ ಮುಳುಗಡೆಯಾದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದ್ದು ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಅಲೆಯ ಹೊಡೆತಕ್ಕೆ ಸಿಲುಕಿ ಬೋಟ್ ಅಡಿಭಾಗದಲ್ಲಿ ಬಿರುಕು ಕಾಣಿಸಿಕೊಂಡು ಈ ಅವಘಢ ಉಂಟಾಗಿದೆ ಎನ್ನಲಾಗಿದೆ. ಉಡುಪಿಯ ಗೀತಾ ಶ್ರೀನಿವಾಸ ಎಂಬವರಿಗೆ ಸೇರಿದ ಮಂಜುನಾಥ ಪ್ರಸಾದ್ ಎನ್ನುವ ಹೆಸರಿನ ಬೋಟ್ ಇದಾಗಿದೆ. ಶನಿವಾರ ರಾತ್ರಿ 11 ರ ಸುಮಾರಿಗೆ ಈ ಬೋಟ್ ಮೀನುಗಾರಿಕೆಗೆ ತೆರಳಿತ್ತು ಎಂದು ಹೇಳಲಾಗಿದೆ.

ದೋಣಿ ಮುಳುಗಡೆ ಸಂದರ್ಭ ಮೀನುಗಾರರು ಬೊಬ್ಬೆ ಹೊಡೆದಿದ್ದು, ಈ ಸಂದರ್ಭದಲ್ಲಿ ಸಮೀಪದಲ್ಲೇ ಮೀನುಗಾರಿಕೆ ಮಾಡುತ್ತಿದ್ದ ಇನ್ನೊಂದು ದೋಣಿಯವರು ಬಂದು ಮೀನುಗಾರರನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News